ಮಗನ ಹತ್ಯೆಗೆ ಪ್ರತಿಕಾರ ತೆಗೆದುಕೊಂಡ ತಂದೆ;ಬೊಕ್ಕಪಟ್ಣದ ಇಂದ್ರಜಿತ್ ಕೊಲೆ ಆರೋಪಿಗಳ ಬಂಧನ
Saturday, November 28, 2020
(ಗಲ್ಫ್ ಕನ್ನಡಿಗ)ಮಂಗಳೂರು; ಆರು ವರ್ಷಗಳ ಹಿಂದೆ ಮಗನ ಹತ್ಯೆಗೆ ಪ್ರತಿಕಾರವಾಗಿ ಮಂಗಳೂರಿನ ಬೊಕ್ಕಪಟ್ಣದಲ್ಲಿ ಇಂದ್ರಜಿತ್ ಕೊಲೆ ಮಾಡಿದ ತಂದೆ ಮತ್ತು ಗ್ಯಾಂಗ ನ್ನು ಪೊಲೀಸರು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಬೊಕ್ಕಪಟ್ಣದಲ್ಲಿ ಎರಡು ದಿನಗಳ ಹಿಂದೆ ಕೊಲೆಯಾದ 28 ವರ್ಷದ ಯುವಕ ಇಂದ್ರಜಿತ್ ಮಂಕಿಸ್ಟ್ಯಾಂಡ್ ರೌಡಿ ಗುಂಪುಗಳ ಜೊತೆಗೆ ಗುರುತಿಸಿಕೊಂಡಿದ್ದ. ಮಂಕಿಸ್ಟ್ತಾಂಡ್ ರೌಡಿಗಳ ತಂಡ ಆರು ವರ್ಷಗಳ ಹಿಂದೆ ಜಗ್ಗ ಯಾನೆ ತಲವಾರು ಜಗ್ಗ ನ ಪುತ್ರ ಸಂಜಯ್ ಯಾನೆ ವರುಣ್ ಎಂಬಾತನನ್ನು ಹೊಯಿಗೆಬೈಲ್ ಕಲ್ಲುರ್ಟಿ ದೈವಸ್ಥಾನದ ಬಳಿ ಭೀಕರವಾಗಿ ಕೊಲೆಗೈದಿತ್ತು. ಮಗನ ಹತ್ಯೆಗೆ ಪ್ರತಿಕಾರ ತೀರಿಸಲು ಜಗ್ಗ ಯಾನೆ ತಲವಾರು ಜಗ್ಗ ತಂಡದೊಂದಿಗೆ ಸೇರಿ ಕೊಲೆಗೈದಿದ್ದಾನೆ. ಇಂದ್ರಜಿತ್ ರಾತ್ರಿ ವೇಳೆಯಲ್ಲಿ ಬೊಕ್ಜಪಟ್ಣದಲ್ಲಿರುವ ಕರ್ನಲ್ ಗಾರ್ಡನ್ ನ ಬೋಟ್ ರಿಪೇರಿ ಯಾರ್ಡ್ ನಲ್ಲಿ ಮಾರಾಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
(ಗಲ್ಫ್ ಕನ್ನಡಿಗ)ಕೊಲೆ ಪ್ರಕರಣ ದಾಖಲಿಸಿಕೊಂಡ ಬರ್ಕೆ ಪೊಲೀಸರು ಬೋಳೂರಿನ ಮೋಕ್ಷಿತ್, ಉಲ್ಲಾಸ್ ಕಾಂಚನ್ (20), ಆಶಿಕ್ (23), ರಾಕೇಶ್ (28), ಗೌತಮ್ (25), ಕೌಶಿಕ್ (25), ಜಗದೀಶ್ ಯಾನೆ ತಲವಾರ್ ಜಗ್ಗ(53), ಶರಣ್ ಯಾನೆ ಚಾನು (19) ಮತ್ತು ಫರಂಗಿಪೇಟೆ ಅರ್ಕುಳದ ನಿತಿನ್ (24) ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)