ಗ್ರಾಮಪಂಚಾಯತ್ ಚುನಾವಣೆಯಲ್ಲಿ BJP ಗೆಲುವಿಗೆ ಕದ್ರಿ ಮಂಜುನಾಥ ದೇವರ ಮೊರೆ ಹೊಕ್ಕ ಮುಖಂಡರು (video)
Saturday, November 28, 2020
ಮಂಗಳೂರು; ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿ ಈಗಾಗಲೇ ತಯಾರಿ ಆರಂಭಿಸಿದೆ. ಗ್ರಾಮ ಸ್ವರಾಜ್ ಮೂಲಕ ಪ್ರಚಾರಕ್ಕೆ ಇಳಿದಿರುವ ಬಿಜೆಪಿ ಚುನಾವಣೆ ಗೆಲ್ಲಲು ದೇವರ ಮೊರೆ ಹೊಕ್ಕಿದೆ.
ಹೌದು ಇವತ್ತು ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ಬಿಜೆಪಿ ಮುಖಂಡರುಗಳು ಗ್ರಾಮಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬರುವಂತೆ ವಿಶೇಷ ಪ್ರಾರ್ಥನೆ ನಡೆಸಿದರು.
ಕರಾವಳಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಇಂದು ಕದ್ರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇವರ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಪ್ರ. ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ,ಮಂಗಳೂರು ಮೇಯರ್ ಜೊತೆಗಿದ್ದರು.
ನಳಿನ್ ಕುಮಾರ್ ಅವರು ಗ್ರಾಮಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಪ್ರಾರ್ಥಿಸುವಂತೆ ಅರ್ಚಕರಲ್ಲಿ ಮನವಿ ಮಾಡಿದರು.