ಮೆಲ್ಕಾರ್ ನಲ್ಲಿ ಚೆನ್ನಾ ಫಾರೂಕ್ ಕೊಲೆ ಪ್ರಕರಣ;ಶೂಟೌಟ್ ಮಾಡಿ ಆರೋಪಿ ಬಂಧಿಸಿದ ಪೊಲೀಸರು
Saturday, October 24, 2020
(ಗಲ್ಫ್ ಕನ್ನಡಿಗ)ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೆಲ್ಕಾರ್ ಬಳಿಯ ಗುಡ್ಡೆಅಂಗಡಿಯಲ್ಲಿ ಯುವಕನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೂಟೌಟ್ ನಡೆಸಿ ಆರೋಪಿಯೊಬ್ಬನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಬಂಟ್ವಾಳದ ತಾಲೂಕಿನ ಮೆಲ್ಕಾರ್ ಗುಡ್ಡೆ ಅಂಗಡಿ ಬಳಿ ಶುಕ್ರವಾರ ಸಂಜೆ ಫಾರೂಕ್ ಯಾನೆ ಚೆನ್ನ ಎಂಬ ಯುವಕ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಮಾರಾಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
(ಗಲ್ಫ್ ಕನ್ನಡಿಗ)ಇಂದು ಮುಂಜಾನೆ ಪುತ್ತೂರಿನ ಗುಂಡ್ಯ ಬಳಿ ಈ ಘಟನೆ ನಡೆದಿದೆ. ಫೈರಿಂಗ್ ಮಾಡಿದ ಬಳಿಕ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಇದೇ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಫೈರಿಂಗ್ ನಲ್ಲಿ ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಖಲೀಲ್ ಗಾಯಗೊಂಡಿದ್ದಾನೆ. ಘಟನೆಯಲ್ಲಿ ಆತನ ಕಾಲಿಗೆ ಗಾಯವಾಗಿದ್ದು, ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
(ಗಲ್ಫ್ ಕನ್ನಡಿಗ)ಕೊಲೆ ಆರೋಪಿಗಳು ಬೆಂಗಳೂರು ಕಡೆಗೆ ಹೋಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ಪೊಲೀಸರು ಗುಂಡ್ಯ ಬಳಿ ಅಡ್ಡಗಟ್ಟಿದ್ದರು. ಆದರೆ ಈ ವೇಳೆ ಆರೋಪಿ ಖಲೀಲ್ ಪೊಲೀಸರ ಮೇಲೆ ತಲವಾರುನಿಂದ ದಾಳಿ ನಡೆಸಿದ್ದ. ಆಗ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗುಂಡಿನ ದಾಳಿ ನಡೆಸಿದ್ದು, ಖಲೀಲ್ ಕಾಲಿಗೆ ಗುಂಡು ತಗುಲಿದೆ.
(ಗಲ್ಫ್ ಕನ್ನಡಿಗ) ಘಟನೆಯಲ್ಲಿ ಎಸ್.ಐ ಪ್ರಸನ್ನ ಅವರಿಗೂ ಗಾಯವಾಗಿದೆ.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅ ವೇಳೆ ಇಬ್ಬರು ಆರೋಪಿ ಅಲ್ಲಿಂದ ತಪ್ಪಿಸಿಕೊಂಡು ಹತ್ತಿರದ ಗುಡ್ಡೆಗೆ ಓಡಿ ಹೋಗಿದ್ದಾರೆ. ಉಪ್ಪಿನಂಗಡಿ ಠಾಣಾ ಎಸ್.ಐ.ಈರಯ್ಯ ಇವರು ಪರಾರಿಯಾದ ಆರೋಪಿಗಳಿಬ್ಬರ ಬಂಧನಕ್ಕೆ ಮುಂದಾಗಿದ್ದು, ಶೋಧ ಕಾರ್ಯ ಆರಂಭಿಸಿದ್ದಾರೆ.
(ಗಲ್ಫ್ ಕನ್ನಡಿಗ)