-->
ads hereindex.jpg
ಮಂಗಳೂರಿನ ಬೀಫ್  ಸ್ಟಾಲ್  ಗಳಿಗೆ ಹೊಸ ಎಚ್ಚರಿಕೆ !

ಮಂಗಳೂರಿನ ಬೀಫ್ ಸ್ಟಾಲ್ ಗಳಿಗೆ ಹೊಸ ಎಚ್ಚರಿಕೆ !


ಮಂಗಳೂರು :- ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಅನೇಕ ಆಕ್ಷೇಪಿತ ದೂರುಗಳು ಬಂದಿರುವುದರಿಂದ ಇನ್ನು ಮುಂದಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಬೀಫ್ ಸ್ಟಾಲ್‍ನಲ್ಲಿ ಬೇರೆ ರಾಜ್ಯ, ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡದಂತೆ ಸಂಬಂಧಿತ ಮಾಲಕರು ಕ್ರಮ ಕೈಗೊಳ್ಳಬೇಕು.

     ಅನಧಿಕೃತವಾಗಿ ಮಾರಾಟ ಮಾಡಿರುವುದು ಕಂಡುಬಂದಲ್ಲಿ ಸ್ಟಾಲಿನ ಪರವಾನಿಗೆಯನ್ನು ರದ್ದುಪಡಿಸಲಾಗುತ್ತದೆ. ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾರಾಟಗಾರರು ಇನ್ನು ಮುಂದಕ್ಕೆ ಪಾಲಿಕೆಯ ಅಧೀನದಲ್ಲಿರುವ ಅಧಿಕೃತ ಕಸಾಯಿಖಾನೆಯಿಂದಲೇ ಮಾಂಸವನ್ನು ಪಡೆದು ಮಾರಾಟ ಮಾಡಬೇಕು. ಎಲ್ಲಾ ಬೀಫ್ ಸ್ಟಾಲ್ ಮಾಲಕರು ತಮ್ಮ ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡಲು ಮಾಂಸವನ್ನು ಕಸಾಯಿಖಾನೆಯಿಂದ ಪಡೆದಾಗ ಮಾಂಸವನ್ನು ಪಡೆದ ವಿವರದ ರಶೀದಿಯನ್ನು ಕಡ್ಡಾಯವಾಗಿ ಇರಿಸಬೇಕು. 

ಕಸಾಯಿಖಾನೆಗೆ ಮಾಂಸಕ್ಕಾಗಿ ಜಾನುವಾರುಗಳನ್ನು ಕೊಂಡೊಯ್ಯುವಾಗ ಆರ್.ಟಿ.ಒ.ದಿಂದ ಅಧಿಕೃತವಾಗಿ ನೋಂದಣಿಗೊಂಡ ಸ್ಪೆಷಲ್ ಪರ್ಮಿಶನ್ ವೈಕಲ್ (ಎಸ್.ಪಿ.ವಿ)ನಲ್ಲೇ ಸಾಗಿಸುವಂತೆ ಸಂಬಂಧಿತ ಕಸಾಯಿಖಾನೆ ಮಾಲಕರುಕ್ರಮ ಕೈಗೊಳ್ಳಬೇಕೆಂದು ಮಂಗಳೂರು ಮಹಾನಗರಪಾಲಿಕೆಯ ಮಹಾಪೌರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2