ನವೆಂಬರ್ ನಿಂದ ಕೋರ್ಟ್ ಫೀ ಪಾವತಿಗೆ ಕೆ2 ಬಳಕೆ: ರಾಜ್ಯಪಾಲರ ಅಧ್ಯಾದೇಶ- ಇಲ್ಲಿದೆ ಸಮಗ್ರ ಮಾಹಿತಿ
Sunday, October 25, 2020
ನ್ಯಾಯಾಲಯ ಶುಲ್ಕವನ್ನು K 2 ಚಲನ್ ಮೂಲಕ ಪಾವತಿಸಲು ಸೂಚನೆ
ಕರ್ನಾಟಕ ನ್ಯಾಯಾಲಯ ಶುಲ್ಕಗಳು ದಾವೆಗಳ ಮೌಲ್ಯ ಮಾಪನ ತಿದ್ದುಪಡಿ ಅಧ್ಯಾದೇಶ ಕ್ಕೆ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ದಿನಾಂಕ 31.7.2020 ರಂದು ಅಂಕಿತ ಹಾಕಿದ್ದು ನೂತನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದೆ.
ಕಾಯಿದೆ ತಿದ್ದುಪಡಿಗಾಗಿ ಹೊರಡಿಸಲಾದ ಆಧ್ಯಾದೇಶದ ಮುಖ್ಯ ಉದ್ದೇಶಗಳೆಂದರೆ
1) ರಾಜಿಯಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ ಪಾವತಿಸಲಾದ ಸ೦ಪೂಣ೯ನ್ಯಾಯಾಲಯ ಶುಲ್ಕವನ್ನು ವಾದಿಗೆ ಮರುಪಾವತಿಸುವುದು.
2) ನ್ಯಾಯಾಲಯ ಶುಲ್ಕ ಪಾವತಿ ಅಥವಾ ಮರುಪಾವತಿಗೆ ವಿದ್ಯುನ್ಮಾನ ಪದ್ಧತಿಯನ್ನು (Electronic Payment) ಅನುಸರಿಸುವುದು
*ಸೆಕ್ಷನ್ 66 ಕ್ಕೆ ತಿದ್ದುಪಡಿ*
1) ಹಿಂದಿನ ಕಾಯಿದೆಯಡಿ ಸಿವಿಲ್ ಪ್ರೊಸೀಜರ್ ಕೋಡ್ ನ ಕಲಂ 89 ರಡಿ ವಿವರಿಸಿದಂತೆ ಮಧ್ಯಸ್ಥಿಕೆ; ರಾಜಿ ಸಂಧಾನ ಲೋಕ ಅದಾಲತ್ ಹಾಗೂ ನ್ಯಾಯಾಲಯದ ಹೊರಗಡೆ ರಾಜಿ ಮೂಲಕ ಇತ್ಯರ್ಥ ಪ್ರಕರಣಗಳಲ್ಲಿ ಪಾವತಿಸಲಾದ ನ್ಯಾಯಾಲಯ ಶುಲ್ಕದ ಪೈಕಿ ಶೇಕಡಾ 75 ರಷ್ಟು ನ್ಯಾಯಾಲಯ ಶುಲ್ಕವನ್ನು ಮರಳಿ ಪಡೆಯಲು ಅವಕಾಶವಿತ್ತು. ಈಗ ತಿದ್ದುಪಡಿಯ ಬಳಿಕ ಶೇಕಡಾ ನೂರರಷ್ಟು ನ್ಯಾಯಾಲಯ ಶುಲ್ಕವನ್ನು ಮರಳಿ ಪಡೆಯಲು ಅವಕಾಶವಿದೆ.
2) ತಿದ್ದುಪಡಿ ಆಧ್ಯಾದೇಶ ಪ್ರಕಾರ ಹೊಸತಾಗಿ ಕಲಂ 68A ಸೇರ್ಪಡೆ ಮಾಡಲಾಗಿದ್ದು ನ್ಯಾಯಾಲಯ ಶುಲ್ಕ ಮರುಪಾವತಿಗೆ ಆದೇಶವಾದಲ್ಲಿ ವಿದ್ಯುನ್ಮಾನ ಪದ್ಧತಿ ಮೂಲಕ ಮರಳಿಸತಕ್ಕದ್ದಾಗಿದೆ.
*3) ನ್ಯಾಯಾಲಯ ಶುಲ್ಕ ಪಾವತಿ ಬಗ್ಗೆ -- ಸೆಕ್ಷನ್ 71 (ನ್ಯಾಯಾಲಯ ಶುಲ್ಕ ಸಂಗ್ರಹಣೆ)*
ಈ ಹಿಂದಿನ ಪದ್ಧತಿ ಪ್ರಕಾರ ಎರಡು ವಿಧಗಳಲ್ಲಿ ನ್ಯಾಯಾಲಯ ಶುಲ್ಕವನ್ನು ಪಾವತಿ ಮಾಡಲು ಅವಕಾಶವಿತ್ತು.
1) ನ್ಯಾಯಾಲಯ ಶುಲ್ಕ ₹500/- ರ ಒಳಗೆ ಇದ್ದಲ್ಲಿ ನಗದಾಗಿ ನ್ಯಾಯಾಲಯದ ಕಚೇರಿಯಲ್ಲಿ ಪಾವತಿಸುವುದು
2) ₹500/-ಕ್ಕಿಂತ ಹೆಚ್ಚಿನ ಮೊತ್ತವನ್ನು ಸರಕಾರಿ ಖಜಾನೆಯಲ್ಲಿ ಅಥವಾ ಡಿಮಾಂಡ್ ಡ್ರಾಫ್ಟ್ ಮುಖಾಂತರ ಪಾವತಿಸಬಹುದಾಗಿತ್ತು.
ನೂತನ ಅಧ್ಯಾದೇಶದ ಮೂಲಕ ಸೆಕ್ಷನ್ 71 ಕ್ಕೆ ತಿದ್ದುಪಡಿ ತರಲಾಗಿದ್ದು ಯಾವುದೇ ಮೊತ್ತದ ನ್ಯಾಯಾಲಯ ಶುಲ್ಕವನ್ನು ವಿದ್ಯುನ್ಮಾನ ಎಂದರೆ K2 ಚಲನ್ ಮೂಲಕ ಪಾವತಿಸಿತಕ್ಕದ್ದಾಗಿದೆ.
ಪ್ರಸ್ತುತ ₹500/- ರ ಒಳಗಿನ ಮೊತ್ತದ ಶುಲ್ಕವನ್ನು ನಗದಾಗಿ ನ್ಯಾಯಾಲಯದ ಕಚೇರಿಯಲ್ಲಿ ಸ್ವೀಕರಿಸಲಾಗುತ್ತದೆ.
ನೂತನ ತಿದ್ದುಪಡಿ ಅಧ್ಯಾದೇಶದ ಬೆಳಕಿನಲ್ಲಿ ರಾಜ್ಯದ ನ್ಯಾಯಾಲಯಗಳಲ್ಲಿ ಪಾವತಿಸ ಬೇಕಾದ ನ್ಯಾಯಾಲಯ ಶುಲ್ಕವನ್ನು ವಿದ್ಯುನ್ಮಾನ ಪಾವತಿ ಅಂದರೆ K 2 ಚಲನ್ ಮೂಲಕ ಸ್ವೀಕರಿಸುವಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸೂಚನೆ ನೀಡಲಾಗಿದೆ.
*K2 ಚಲನ್ ಮೂಲಕ ಪಾವತಿಯ ವಿಧಾನ*
*Procedure for E payment*
Open the below URL K2 challan generation link
https:/k2.karnataka.gov.in/K2
Click on general challan
2) Enter the first name; last name; mobile number; email ID and address in remitter details
3) In department details
*select category as government
*select district
*select department as High Court of Karnataka Subordinate Judiciary
* check for DDO code
4) In payment details for payment of COURT FEE
* select purpose as court fees/ Court fees realised in cash
* check the Head Of Account. Head of account should be 0070-01-501-0-01-000
*select the purpose as court fees
ಕರ್ನಾಟಕ ನ್ಯಾಯಾಲಯ ಶುಲ್ಕಗಳು ಮತ್ತು ದಾವೆಗಳ ಮೌಲ್ಯ ಮಾಪನ ಕಾಯಿದೆಗೆ ತಿದ್ದುಪಡಿ ಮಾಡಿ ಸರಕಾರವು ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸೂಚನೆ ನೀಡಿರುವುದರಿಂದ ದಿನಾಂಕ 2.11.2020 ರಿಂದ ನ್ಯಾಯಾಲಯದಲ್ಲಿ ದಾಖಲು ಮಾಡುವ ಎಲ್ಲಾ ದಾವೆಗಳಲ್ಲಿ ನ್ಯಾಯಾಲಯ ಶುಲ್ಕವನ್ನು K2 ಚಲನ್ ಮೂಲಕ ಪಾವತಿ ಮಾಡುವಂತೆ ಕೋರಲಾಗಿದೆ.
*ಮಾಹಿತಿ: ಪ್ರಕಾಶ್ ನಾಯಕ್; ಶಿರಸ್ತೆದಾರರು; ಜುಡಿಶಿಯಲ್ ಸರ್ವಿಸ್ ಸೆಂಟರ್; ಮಂಗಳೂರು*