ಅಸ್ರಣ್ಣ - ಪಟ್ಲ ಸತೀಶ್ ಶೆಟ್ಟಿ: ಯಕ್ಷಗಾನದ ಬದ್ಧ ಪ್ರತಿಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ!
ಮಂಗಳೂರು: ಕಟೀಲು ಮೇಳ ಎಂದು ಜೀವ ಬಿಡುತ್ತಿದ್ದ ಪಟ್ಲ ಸತೀಶ್ ಶೆಟ್ಟಿ ಈಗ ಆ ಮೇಳದಿಂದ ದೂರವಾಗಿದ್ದಾರೆ. ಇದಕ್ಕೆ ಕಾರಣ ಎಂದು ಎಲ್ಲರಿಗೂ ಗೊತ್ತು...
ಈ ಘಟನೆಗೆ ಕಾರಣ ಹಲವು... ಆದರೆ, ಅದರಲ್ಲಿ ಒಂದು ಅಸ್ರಣ್ಣ ಮತ್ತು ಸತೀಶ್ ಶೆಟ್ಟಿ ನಡುವಿನ ಸಣ್ಣ ಮನಸ್ತಾಪ... ಹೌದು, ಈ ವಿಷಯವೇ ದೊಡ್ಡದಾಯಿತು. ಹಲವು ಕ್ಯಾತೆಗಳು, ಸಣ್ಣ ಪುಟ್ಟ ಘಟನೆಗಳು ವಿಚಿತ್ರ ತಿರುವು ಪಡೆದುಕೊಂಡು ಸಾರ್ವಜನಿಕರ ಮಧ್ಯದಲ್ಲೇ ರಂಗಸ್ಥಳದಿಂದಲೇ ಪಟ್ಲ ಅವರು ನಿರ್ಗಮಿಸಿದರು.
ಇದರಿಂದ ಪಟ್ಲ ಮತ್ತು ಅಸ್ರಣ್ಣ ಅಭಿಮಾನಿಗಳು ಮತ್ತು ಹಿತೈಷಿಗಳ ನಡುವಿನ ಸಂಬಂಧ ಮತ್ತಷ್ಟು ಹಳಸಿತು. ಇದೀಗ ಹೊಸ ಮೇಳಕ್ಕೆ ಸತೀಶ್ ಶೆಟ್ಟಿ ಯಜಮಾನರಾಗಿ ನಿಯುಕ್ತರಾಗಿದ್ದಾರೆ.
ಯಕ್ಷಗಾನಕ್ಕೆ ಹೊಸ ಖದರ್ ತಂದುಕೊಟ್ಟ ಪಟ್ಲ ಸತೀಶ್ ಶೆಟ್ಟಿ ಮತ್ತು ಕಟೀಲು ಮೇಳದ ಎಲ್ಲ ವ್ಯವಹಾರಗಳನ್ನು ದಶಕದಿಂದ ನಡೆಸುತ್ತಲೇ ಬಂದಿರುವ ಹರಿನಾರಾಯಣ ಆಸ್ರಣ್ಣ ಅವರು ಒಂದೇ ಸಭೆಯಲ್ಲಿ ಭಾಗವಹಿಸಿದರು. ಅದೂ ಒಂದೇ ಸಾಲಿನಲ್ಲಿ ಕೂತು ದಕ್ಷಿಣ ಕನ್ನಡ ಜಿಲ್ಲಾ ಸಚಿವರ ಮುಂದೆ ಯಕ್ಷಗಾನ ಬಗ್ಗೆ ವಿಷಯ ಮಂಡಿಸಿದರು.
Covid ಸಮಸ್ಯೆಯಿಂದಾಗಿ ಯಕ್ಷಗಾನ ಪ್ರಾರಂಭ ಮಾಡುವ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ವೃತ್ತಿಪರ ಯಕ್ಷಗಾನ ಮೇಳದ ಸಂಚಾಲಕರ ಜೊತೆ ಮಾನ್ಯ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ದಕ್ಷಿಣಕನ್ನಡ ಜಿಲ್ಲಾಧಿಕಾರಿಯರಿಂದ ಸಭೆ ನಡೆಯಿತು.
ಈ ಸಭೆಯ ಫೋಟೋ ಈಗ ವೈರಲ್ ಆಗಿದೆ.