ಇಂಟರ್‌ನ್ಯಾಷನಲ್ ಆಗಿ ಟ್ರೋಲ್ ಆಗುತ್ತಿರುವ ಮಂಗಳೂರು ರಸ್ತೆಗಳು...!!!
ಮಂಗಳೂರು: ಮಂಗಳೂರು ರಸ್ತೆಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ. ಕರಾವಳಿಯ ರಸ್ತೆಗಳು ಅಂದರೆ ತಾಪತ್ರಯ ತಪ್ಪಿದ್ದಲ್ಲ...
ಇನ್ಫೋಸಿಸ್ ದಿಗ್ಗಜ ಮೋಹನ್ ದಾಸ್ ಪೈ ಅವರು ಟ್ವೀಟ್ ಭಾರೀ ಸುದ್ದಿ ಮಾಡಿದೆ. ಈಗ ರಾಜಧಾನಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯಾವಾಗ ಎಂದು ನಳಿನ್ ಕುಮಾರ್ ಅವರನ್ನು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಅಷ್ಟೇ ಅಲ್ಲ, ಫೇಸ್‌ಬುಕ್, ಟ್ವಿಟ್ಟರ್ ಸಹಿತ ಸಾಮಾಜಿಕ ಜಾಲ ತಾಣದಲ್ಲಿ ರಸ್ತೆಗಳದ್ದೇ ಸುದ್ದಿ. ಇಲ್ಲಿನ ಜನಪ್ರತಿನಿಧಿಗಳನ್ನು ಜನ ಗೇಲಿ ಮಾಡುವಂತಾಗಿದೆ.
ಹಿಂದೆಲ್ಲ, ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇರಲಿಲ್ಲ. ಇದೀಗ ಆ ಭಾಗ್ಯವೂ ನಮ್ಮ ರಾಜ್ಯದ ಜನರಿಗೆ ಸಿಕ್ಕಿದೆ. ದಕ್ಷಿಣ ಕನ್ನಡದಲ್ಲಿ ಸಂಸದರು ಮತ್ತು ಶಾಸಕರೂ ಆಡಳಿತ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದಾರೆ.
ಆದರೆ, ಸುಂದರ ರಸ್ತೆ, ಸುಗಮ ಸಂಚಾರದ ಹೆದ್ದಾರಿ ಭಾಗ್ಯ ಯಾವಾಗ ಎಂದು ಕೇಳುವಂತಾಗಿದೆ...