-->

ನರೇಗಾದಡಿ ಬಾವಿ, ಇಂಗು ಗುಂಡಿ, ಬಚ್ಚಲು ಗುಂಡಿ  ನಿರ್ಮಾಣ, ತೋಟಗಾರಿಕಾ ಬೆಳೆಗೆ  ವಿಶೇಷ ಆದ್ಯತೆ: ಯೋಜನೆಯ ಗರಿಷ್ಟ ಲಾಭ ಪಡೆಯಲು ವಿಶ್ವನಾಥ ಬೈಲಮೂಲೆ ಮನವಿ

ನರೇಗಾದಡಿ ಬಾವಿ, ಇಂಗು ಗುಂಡಿ, ಬಚ್ಚಲು ಗುಂಡಿ ನಿರ್ಮಾಣ, ತೋಟಗಾರಿಕಾ ಬೆಳೆಗೆ ವಿಶೇಷ ಆದ್ಯತೆ: ಯೋಜನೆಯ ಗರಿಷ್ಟ ಲಾಭ ಪಡೆಯಲು ವಿಶ್ವನಾಥ ಬೈಲಮೂಲೆ ಮನವಿ

        ಕಿನ್ಯಾ ಗ್ರಾಮ ಪಂಚಾಯತ್ ನಲ್ಲಿ ಇಂದು ಗಾಂಧಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ  ಮ.ಗಾ.ರಾ.ಗ್ರಾ.ಉ.ಖಾತರಿ ಯೋಜನೆಯ 2021-22 ನೇ ಸಾಲಿನ  ಕಾಮಗಾರಿ ಗುಚ್ಚ ತಯಾರಿ ವಿಶೇಷ ಗ್ರಾಮ ಸಭೆ ನಡೆಸಲಾಯಿತು. ಈ ವೇಳೆ
ಕಿನ್ಯಾ ಗ್ರಾ.ಪಂ ಅಭಿವೃದ್ದಿ ಅಧಿಕಾರಿಯಾದ  ಇವರು  ಜನರಿಗೆ ಮಾಹಿತಿ ನೀಡುತ್ತಾ ಮಹಾತ್ಮಾ ಗಾಂಧಿಯವರು ಕಂಡಿದ್ದ ಗ್ರಾಮ ರಾಜ್ಯದ ಕನಸನ್ನು ನನಸಾಗಿಸಲು ಈ ಉದ್ಯೋಗ ಖಾತರಿ ಯೋಜನೆ ಒಂದು ಒಳ್ಳೆಯ ಯೋಜನೆ. ಇದರ ಮಾರ್ಗ ಸೂಚಿಗಳನ್ನು ಪಾಲಿಸಿಕೊಂಡು ಗ್ರಾಮಕ್ಕೆ ಸಂಬಂಧಿಸಿದಂತೆ ಗರಿಷ್ಟ  ಪ್ರಯೋಜನ ಪಡೆಯಲು ಕೋರಿದರು.  ತಾಲೂಕು ಸಾಮಾಜಿಕ ಪರಿಶೋಧನಾ ಸಂಯೋಜಕರಾದ ಶ್ರೀಮತಿ ಧನಲಕ್ಷ್ಮಿ  ಇವರು ನರೇಗಾ ಯೋಜನೆಯ ಉದ್ದೇಶ,  ಅವಕಾಶ,  ಮತು ಈ ಯೋಜನೆಯಡಿ ಸಾರ್ವಜನಿಕರು ಹೇಗೆ  ಸವಲತ್ತುಗಳನ್ನು ಪಡೆಯಬಹುದು ಎಂಬುದರ  ಬಗ್ಗೆ ಮಾಹಿತಿ ನೀಡಿದರು. ತಾಂತ್ರಿಕ ಸಹಾಯಕರಾದ ಶ್ರೀಮತಿ ಕೃತಿಕ ಇವರು ಈ ಯೋಜನೆಯಡಿಯಲ್ಲಿ ಅಡಿಕೆ,  ತೆಂಗು,  ಕಾಳುಮೆಣಸು,  ಪೌಷ್ಟಿಕ ತೋಟ ನಿರ್ಮಾಣ ಮುಂತಾದ ತೋಟಗಾರಿಕೆ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ತಾಂತ್ರಿಕ ಸಹಾಯಕ ಅಭಿಯಂತರರು ಶ್ರೀ ರಾಜ್ ಕುಮಾರ್ ಇವರು ನರೇಗಾ ಯೋಜನೆಯಡಿ  ಬಾವಿ ರಚನೆ  ಇಂಗು (Soak pit) ಗುಂಡಿ  ಮೇಕೆ ಶೆಡ್,  ಕೋಳಿ ಫಾರ್ಮ್ಸಾ,  ದನದ ಹಟ್ಟಿ, ಮುಂತಾದ ಸಾರ್ವಜನಿಕ/ವೈಯುಕ್ತಿಕ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು, ಈ ಸಂಧರ್ಭದಲ್ಲಿ ನಿಕಠಪೂರ್ವ ಉಪಾಧ್ಯಕ್ಷರಾದ ಶ್ರೀ ಸಿರಾಜುದ್ದೀನ್ ಹಾಗೂ ನಿಕಟ ಪೂರ್ವ ಸದಸ್ಯರಾದ ಫಾರೂಕ್ ಕಿನ್ಯ, ಹಮೀದ್ ಕಿನ್ಯಾ  ಮತ್ತಿತರರು,  ಗ್ರಾಮಸ್ಥರು ಬಹಳಷ್ಟು  ಸಂಖ್ಯೆಯಲ್ಲಿ ಆಗಮಿಸಿದ್ದ  ಕಾರ್ಯಕ್ರಮದಲ್ಲಿ     ಪ್ರಾರಂಭದಲ್ಲಿ ಗಾಂಧೀಜಿಯ  ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು  ಪಿಡಿಒ ವಿಶ್ವನಾಥ್ ಸ್ವಾಗತಿಸಿ  ಕೊನೆಯಲ್ಲಿ  ಗ್ರಾ.ಪಂ.ನ ಕಾರ್ಯದರ್ಶಿಯಾದ ಶ್ರೀಮತಿ ಸುರೇಖಾ ಇವರ ದನ್ಯವಾದಗಳನ್ನು ಸಮರ್ಪಿಸಿದರು ಸಿಬ್ಬಂದಿಗಳು ಕಾರ್ಯಕ್ರಮ .ನಿರ್ವಹಿಸಿದರು 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99