ಮಂಗಳೂರಿನ ಪೆಟ್ರೋಲ್ ಪಂಪ್, ಎಟಿಪಿ ಮೆಷಿನ್ ಇವರ ಟಾರ್ಗೆಟ್; ಅಶ್ರಫ್, ಆಶಿಕ್ , ಅರ್ಫಾನ್ ಎಂಬ 20 ವರ್ಷದೊಳಗಿನ ಯುವಕರ ಖತರ್ನಾಕ್ ಕೃತ್ಯ


(ಗಲ್ಫ್ ಕನ್ನಡಿಗ)ಮಂಗಳೂರು:  ಸುಲಭವಾಗಿ ಹಣ ಮಾಡಲು ಕಳವಿನ ದಾರಿ ಹಿಡಿದ ಮಂಗಳೂರಿನ ಮೂವರು ಹದಿಹರೆಯದ ಯುವಕರನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

(ಗಲ್ಫ್ ಕನ್ನಡಿಗ)19 ವರ್ಷ ಪ್ರಾಯದ ಮಂಗಳೂರಿನ ಕೆ ಸಿ ರೋಡ್ ನ ಮುಹಮ್ಮದ್ ಸುಹೈಲ್ ಯಾನೆ ಅಶ್ರಫ್,  ಆಶಿಕ್, 20 ವರ್ಷದ ಮಂಗಳೂರಿನ ಫಳ್ನೀರ್ ನ ಮುಹಮ್ಮದ್ ಅರ್ಫಾನ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

(ಗಲ್ಫ್ ಕನ್ನಡಿಗ)ಹಲವೆಡೆ ಪೆಟ್ರೋಲ್ ಪಂಪ್ ಮತ್ತು ಎಟಿಪಿ ಮೆಷಿನ್ ಕಳವು ಮಾಡುತ್ತಿದ್ದ ಇವರಿಗೆ ಮಂಗಳೂರಿನ ಉಜ್ಜೋಡಿಯಲ್ಲಿ ಪೆಟ್ರೋಲ್ ಪಂಪ್ ನಲ್ಲಿ ಮಾಡಿದ ಕಳ್ಳತನ ಸೆರೆವಾಸಕ್ಕೆ ಕೊಂಡೋಯ್ದಿದೆ. ಹಲವೆಡೆ ಕಳವು ಮಾಡಿದ್ದರೂ ಇವರು ಸಿಕ್ಕಿಬಿದ್ದಿರಲಿಲ್ಲ. ಸೆಪ್ಟೆಂಬರ್ 20 ರಂದು ರಾತ್ರಿ  ಇವರು ಮಂಗಳೂರಿನ ಉಜ್ಜೋಡಿಯಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ ಕಳವು ನಡೆಸಿದ್ದರು.ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಪೆಟ್ರೋಲ್ ಮಾಲೀಕರ ಸಂಘವು ಪೆಟ್ರೋಲ್ ಪಂಪಿನಲ್ಲಿ ನಡೆಯುತ್ತಿರುವ ಕಳವು ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಮಂಗಳೂರು ಪೊಲೀಸ್ ಕಮೀಷನರ್ ಗೆ ಮನವಿಯನ್ನು ನೀಡಿತ್ತು.


(ಗಲ್ಫ್ ಕನ್ನಡಿಗ)ಪ್ರಕರಣದ ಬೆಂಬತ್ತಿದ್ದ ಮಂಗಳೂರಿನ ಕಂಕನಾಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇವರು ಕಳವು ಮಾಡಿದ ಇತರ ಪ್ರಕರಣಗಳು ಈ ಕೆಳಗಿನಂತಿದೆ

(ಗಲ್ಫ್ ಕನ್ನಡಿಗ)