ಮಂಗಳೂರಿನ ವೆಲೆನ್ಸಿಯಾದಲ್ಲಿ ಅಫೀಜ್ ನ ಪ್ಲ್ಯಾಟ್ ನಲ್ಲಿ ವೇಶ್ಯಾವಾಟಿಕೆ; ಇಬ್ಬರು 20 ವರ್ಷದ ಯುವತಿಯರ ರಕ್ಷಣೆ


(ಗಲ್ಫ್ ಕನ್ನಡಿಗ)ಮಂಗಳೂರು: ಮಂಗಳೂರಿನ ವೆಲೆನ್ಸಿಯಾದಲ್ಲಿ ಅಫೀಜ್ ಎಂಬವನ ಪ್ಲ್ಯಾಟ್ ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಮೇಲೆ ಮಂಗಳೂರು ಪಾಂಡೇಶ್ವರ ಪೊಲೀಸರು ದಾಳಿ ನಡೆಸಿದ್ದಾರೆ.

(ಗಲ್ಫ್ ಕನ್ನಡಿಗ)ಗಣೇಶ್ ಶೆಟ್ಟಿ ಎಂಬಾತ ಅಫೀಜ್ ನ ಪ್ಲ್ಯಾಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ಇವರಿಗೆ ಹರಿಣಾಕ್ಷಿ ಎಂಬಾಕೆ ಸಹಕರಿಸುತ್ತಿದ್ದಳು. ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಬೆಂಗಳೂರು ಮೂಲದ ಸುಮಾರು 20 ವರ್ಷ ಪ್ರಾಯದ ಇಬ್ಬರು ಯುವತಿಯರಿದ್ದರು. ಅವರನ್ನು ಪೊಲೀಸರು ರಕ್ಷಿಸಿದ್ದಾರೆ.

(ಗಲ್ಫ್ ಕನ್ನಡಿಗ)ಗಣೇಶ್ ಶೆಟ್ಟಿ, ಹರಿಣಾಕ್ಷಿ ಮತ್ತು ಅಫೀಜ್ ನನ್ನು ಪೊಲೀಸರು ಬಂಧಿಸಿದ್ದಾರೆ.


(ಗಲ್ಫ್ ಕನ್ನಡಿಗ)