ಅರ್ಕುಳದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ!
Wednesday, October 28, 2020
(ಗಲ್ಫ್ ಕನ್ನಡಿಗ)ಮಂಗಳೂರು; ತನ್ನಿಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ) ರೇಖಾ ಪಿರೇರಾ (39) ತಾಯಿ, ಡೇಲಿಶಾ ಅನ್ನಾ ಪಿರೇರಾ (15), ಡೆಲ್ಸನ್ ರಾಲ್ಪ್ ಪಿರೇರಾ (10) ಮಕ್ಕಳು ಅಕ್ಟೋಬರ್ 21 ರಂದು ಮಂಗಳೂರು ತಾಲೂಕಿನ ಅರ್ಕುಳ ಗ್ರಾಮದ ವಳಚ್ಚಿಲ, ನವಜ್ಯೋತಿನಗರ ಎಂಬಲ್ಲಿಯ ಮನೆಯಿಂದ ಕಾಣೆಯಾಗಿದ್ದಾರೆ.
(ಗಲ್ಫ್ ಕನ್ನಡಿಗ) ಕಾಣೆಯಾದ ಮಹಿಳೆ (ತಾಯಿ)ಯ ಚಹರೆ ಇಂತಿವೆ: ಹೆಸರು-ರೇಖಾ ಪಿರೇರಾ, ಪ್ರಾಯ - 39 ವರ್ಷ, ಎತ್ತರ- 4.6, ಎಣ್ಣೆಗಪ್ಪು ಮೈ ಬಣ್ಣ, ಕೊರಳಲ್ಲಿ ಚಿನ್ನದ ಚೈನ್ ಧರಿಸಿರುತ್ತಾರೆ. ಮಾತನಾಡುವ ಭಾಷೆ - ಕೊಂಕಣಿ, ಕನ್ನಡ, ತುಳು.
ಇದನ್ನು ಓದಿ; ಮಂಗಳೂರಿನಲ್ಲಿ 19 ವರ್ಷದ ಯುವತಿ ನಾಪತ್ತೆ
(ಗಲ್ಫ್ ಕನ್ನಡಿಗ) ಕಾಣೆಯಾದವರ ಬಗ್ಗೆ ಮಾಹಿತಿ ದೊರಕಿದಲ್ಲಿ ಪೊಲೀಸ್ ಉಪನಿರೀಕ್ಷಕರು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: 0824-2220535, 0824-2220814, 0824-2220801, 22212108 ಸಂಪರ್ಕಿಸಲು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಗಲ್ಫ್ ಕನ್ನಡಿಗ)