ಮಂಗಳೂರು ಏರ್ ಪೋರ್ಟ್ ನಲ್ಲಿ 32 ಲಕ್ಷ ಮೌಲ್ಯದ ಚಿನ್ನ ಸಾಗಾಟ; ಬಲೆಗೆ ಬಿದ್ದ ಕುಡ್ಲದ ಅಬೂಬಕ್ಕರ್ ಸಿದ್ದಿಕ್
Wednesday, October 28, 2020
(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರು ವಿಮಾನ ನಿಲ್ದಾಣದಲ್ಲಿ ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮಂಗಳೂರಿನ ವ್ಯಕ್ತಿಯನ್ನು ಕಸ್ಟಂ ಅಧಿಕಾರಿಗಳು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಮಂಗಳೂರಿನ ಅಬೂಬಕ್ಕರ್ ಸಿದ್ದಿಕ್ ಬಂಧಿತ ಆರೋಪಿ. ಈತ ಸೋಮವಾರ (ಅ. 26) ದಂದು ದುಬೈನಿಂದ ಮಂಗಳೂರಿಗೆ ಬಂದ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿದ್ದ. ಈತನನ್ನು ಶೋಧಿಸಿದಾಗ ಈತನ ಬಳಿ 24 ಕ್ಯಾರೆಟ್ ಪರಿಶುದ್ದತೆಯ 634 ಗ್ರಾಂ ಚಿನ್ನಸಿಕ್ಕಿದೆ. ಇದನ್ನು ಈತ ಪೌಡರ್ ರೂಪದಲ್ಲಿ ಅಡಗಿಸಿಟ್ಟು ತಂದಿದ್ದ. ಇದರ ಮೌಲ್ಯ 32 96800 ಎಂದು ಅಂದಾಜಿಸಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದುಕೊಂಡ ಕಸ್ಟಮ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)