ಮಂಗಳೂರಿನಲ್ಲಿ 19 ವರ್ಷದ ಯುವತಿ ನಾಪತ್ತೆ
Wednesday, October 28, 2020
(ಗಲ್ಫ್ ಕನ್ನಡಿಗ)
ಮಂಗಳೂರು ; ಮಂಗಳೂರಿನಲ್ಲಿ 19 ವರ್ಷದ ಯುವತಿ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ) ಲಕ್ಷ್ಮೀಬಾಯಿ (19) ಎಂಬ ಯುವತಿ ಅಕ್ಟೋಬರ್ 18 ರಂದು ಕಣ್ಣೂರು ಗ್ರಾಮದ ಬಾಡಿಗೆ ಮನೆಯಿಂದ ಕೆಲಸಕ್ಕೆಂದು ಹೋದವಳು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿದ್ದಾಳೆ.
(ಗಲ್ಫ್ ಕನ್ನಡಿಗ) ಕಾಣೆಯಾದ ಯುವತಿಯ ಚಹರೆ ಇಂತಿವೆ: ಹೆಸರು - ಲಕ್ಷ್ಮೀಬಾಯಿ, ಪ್ರಾಯ - 19 ವರ್ಷ, ಎತ್ತರ- 5.5 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ, ಧರಿಸಿದ ಬಟ್ಟೆ - ಬಿಳಿ ಟಾಪ್, ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಶಾಲು ಧರಿಸಿರುತ್ತಾಳೆ. ಮಾತನಾಡುವ ಭಾಷೆ- ಲಂಬಾಣಿ, ಕನ್ನಡ, ತುಳು.
(ಗಲ್ಫ್ ಕನ್ನಡಿಗ) ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರಕಿದಲ್ಲಿ ಠಾಣಾಧಿಕಾರಿ, ಕಂಕನಾಡಿ ನಗರ ಠಾಣೆ, ದೂರವಾಣಿ ಸಂಖ್ಯೆ: 0824-2220529, 9480805354, 0824-2220800 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.