ಸುಳ್ಯದಲ್ಲಿ ಹದಿಹರೆಯದ ಯುವತಿ ಆತ್ಮಹತ್ಯೆ: ಕಾರಣ ನಿಗೂಢ!
(ಗಲ್ಪ್ ಕನ್ನಡಿಗ)ಮಂಗಳೂರು: ಹದಿಹರೆಯದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.
(ಗಲ್ಪ್ ಕನ್ನಡಿಗ)ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಗಂಗಾಧರ ನಾಯ್ಕ್ ಎಂಬವರ ಪುತ್ರಿ ಪ್ರಸನ್ನ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ನಿನ್ನೆ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿಯ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿಪರಿಶೀಲನೆ ನಡೆಸಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ: ಕಲ್ಲು ಕುಟಿಗ ಮಹಿಳೆ ಈಗ ಪೊಲೀಸ್ ಅಧಿಕಾರಿ: ಎರಡು ಮಕ್ಕಳ ತಾಯಿ ಛಲಕ್ಕೆ ಶರಣು
ಇದನ್ನು ಓದಿ: *ಪ್ರೀತಿಗೆ ವಿರೋಧ; ಸುಳ್ಯದಲ್ಲಿ ಆತ್ಮಹತ್ಯೆ ಶರಣಾದ ಯುವ ಜೋಡಿ
(ಗಲ್ಪ್ ಕನ್ನಡಿಗ)