ಕಲ್ಲು ಕುಟಿಗ ಮಹಿಳೆ ಈಗ ಪೊಲೀಸ್ ಅಧಿಕಾರಿ: ಎರಡು ಮಕ್ಕಳ ತಾಯಿ ಛಲಕ್ಕೆ ಶರಣು
Friday, October 23, 2020
ಮಹಿಳೆ ಮನಸ್ಸು ಮಾಡಿದರೇ ಏನು ತಾನೆ ಅಸಾಧ್ಯ...? ಈ ಮಾತಿಗೆ ಸಾಕ್ಷಿಯಾಗಿ ನಮ್ಮ ಮುಂದೆ ನಿಂತವರು ಮಹಾರಾಷ್ಟ್ರದ ಕಲ್ಲುಕುಟ್ಟಿಗ ಸಮುದಾಯದ ಈ ಧೀರ ಮಹಿಳೆ.
ಈಕೆ ಹೆಸರು ಪದ್ಮಶೀಲಾ ತಿರ್ಪುಡೆ. ಮಹಾರಾಷ್ಟ್ರ ರಾಜ್ಯದ ನಾಸಿಕ ಬಳಿ ಇರುವ ಪಹೆಲಾ ಗ್ರಾಮದವರು. ಈಕೆ ಕಲ್ಲು ಕುಟ್ಟಿಗ ಸಮುದಾಯಕ್ಕೆ ಸೇರಿದವರು.
ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದ ಸದಸ್ಯೆಯಾಗಿರುವ ಈಕೆ ಬಹಳ ಕಷ್ಟಕರ ಜೀವನ ನಡೆಸುತ್ತಿದ್ದರು. ಎರಡು ಮಕ್ಕಳ ತಾಯಿಯಾಗಿ ಛಲಬಿಡದೆ ಗುರಿ ಸಾಧಿಸಿದ ಛಲಗಾರ್ತಿ.
ಇದಕ್ಕೆ ಆಕೆಯ ಪತಿಯ ಸಂಪೂರ್ಣ ಪ್ರೋತ್ಸಾಹವೂ ಕಾರಣ. ಈಗ ಪೊಲೀಸ್ ಅಧಿಕಾರಿಯಾಗಿ ಇಲಾಖೆಗೆ ಭರ್ತಿಯಾಗಿರುವ ಪದ್ಮ, ನಾಸಿಕ್ ಜಿಲ್ಲೆಯ ಎಸ್‌ಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Nothing is impossible ಎಂದು ಹೇಳುವುದು ಇದಕ್ಕೆ. ಈಕೆ ಎಲ್ಲ ಛಲಗಾರ ಮಹಿಳೆಯರಿಗೆ ಒಂದು ಒಳ್ಳೆಯ ನಿದರ್ಶನವಾಗಲಿ.