
ಮಂಗಳೂರು ಏರ್ ಫೊರ್ಟ್ ನಲ್ಲಿ ಅರ್ಧ ಕಿಲೋ ಚಿನ್ನ ಸಾಗಿಸಿದ ಅಶ್ರಫ್ ಅಹ್ಮದ್ ಅರೆಸ್ಟ್!
(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರು ವಿಮಾನ ನಿಲ್ದಾಣದಲ್ಲಿ ಅರ್ಧ ಕಿಲೋ ಗಿಂತಲೂ ಹೆಚ್ಚು ಚಿನ್ನವನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಕಸ್ಟಂ ಅಧಿಕಾರಿಗಳು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಅಶ್ರಫ್ ಮುಹಮ್ಮದ್ ಎಂಬಾತ ಆರೋಪಿ.ಈತನಿಂದ 531.390 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 2736659 ರೂ ಎಂದು ಅಂದಾಜಿಸಲಾಗಿದೆ.
(ಗಲ್ಫ್ ಕನ್ನಡಿಗ)ಈತ 24 ಕ್ಯಾರೆಟ್ ಪರಿಶುದ್ದತೆಯುಳ್ಳ ಚಿನ್ನವನ್ನು ಪೌಡರ್ ರೂಪದಲ್ಲಿ ದೇಹದಲ್ಲಿ ಅಡಗಿಸಿಟ್ಟು ತಂದಿದ್ದ. ಅಕ್ಟೋಬರ್ 20 ರಂದು ದುಬಾಯಿನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಈ ಚಿನ್ನವನ್ನು ತಂದಿದ್ದ. ಈತನನ್ನು ಬಂಧಿಸಿದ ಕಸ್ಟಂ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
(ಗಲ್ಫ್ ಕನ್ನಡಿಗ)