ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪಟ್ಟಿ ಪ್ರಕಟ: ಸಂಪೂರ್ಣ ಮಾಹಿತಿ ಇಲ್ಲಿದೆ
(ಗಲ್ಪ್ ಕನ್ನಡಿಗ)ಮಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಹಾಗೂ 5 ಜನ ಗಣ್ಯರಿಗೆ ವಾರ್ಷಿಕ ಗೌರವ ಪ್ರಶಸ್ತಿ, 10 ಜನ ಗಣ್ಯರಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಹಾಗೂ ಪುಸ್ತಕ ಬಹುಮಾನಕ್ಕೆ 3 ಜನ ಗಣ್ಯರನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಪಾರ್ತಿಸುಬ್ಬ ಪ್ರಶಸ್ತಿ - ಅಂಬಾತನಯ ಮುದ್ರಾಡಿ, ಪುರಷ್ಕೃತರಿಗೆ ರೂ.1 ಲಕ್ಷ ನಗದು, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.
(ಗಲ್ಪ್ ಕನ್ನಡಿಗ) ಗೌರವ ಪ್ರಶಸ್ತಿಗೆ ಆಯ್ಕೆಯಾದ 5 ಗಣ್ಯರ ಹೆಸರು :- ಚಂದ್ರಶೇಖರ್ ದಾಮ್ಲೆ, ಡಾ. ಆನಂದರಾಮ ಉಪಾಧ್ಯ, ರಾಮಕೃಷ್ಣ ಗುಂದಿ, ಕೆ.ಸಿ.ನಾರಾಯಣ, ಚಂದ್ರು ಕಾಳೇನಹಳ್ಳಿ . ಪುರಷ್ಕೃತರಿಗೆ ತಲಾ ರೂ.50,000, ಪ್ರಶಸ್ತಿ ಫಲಕ, ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.
(ಗಲ್ಪ್ ಕನ್ನಡಿಗ)ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ 10 ಗಣ್ಯರ ಹೆಸರು :- ನೆಲ್ಲೂರು ಜನಾರ್ದನ ಆಚಾರ್ಯ, ಉಬರಡ್ಕ ಉಮೇಶ ಶೆಟ್ಟಿ, ನಿಡ್ಲೆ, ಕುರಿಯ ಗಣಪತಿ ಶಾಸ್ತ್ರಿ, ಆರ್ಗೋಡು ಮೋಹನದಾಸ್ ಶೆಣೈ, ಮಹಮ್ಮದ್ ಗೌಸ್, ರಾಮಚಂದ್ರ ಹೆಗಡೆ, ಎಂ.ಎನ್.ಹೆಗಡೆ, ಹಾರಾಡಿ ಸರ್ವೋತ್ತಮ ಗಾಣಿಗ, ಮುಖವೀಣೆ ರಾಜಣ್ಣ, ಎ.ಜಿ.ಅಶ್ವಥ ನಾರಾಯಣರವರನ್ನು ಆಯ್ಕೆ ಮಾಡಲಾಗಿದೆ. ಪುರಷ್ಕೃತರಿಗೆ ತಲಾ ರೂ.25,000, ಪ್ರಮಾಣ ಪತ್ರ ಪುರಸ್ಕರಿಸಲಾಗುವುದು.
(ಗಲ್ಪ್ ಕನ್ನಡಿಗ)ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ 3 ಗಣ್ಯರ ಹೆಸರು :- ಹೊಸ್ತೋಟ ಮಂಜುನಾಥ ಭಾಗವತ್, ಕೃಷ್ಣಪ್ರಕಾಶ ಉಳಿತ್ತಾಯ, ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಇವರನ್ನು ಆಯ್ಕೆ ಮಾಡಲಾಗಿದೆ. ಪುಸ್ತಕ ಬಹುಮಾನ ಪುರಷ್ಕೃತರಿಗೆ ತಲಾ ರೂ.25,000 ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.
(ಗಲ್ಪ್ ಕನ್ನಡಿಗ)ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಮತ್ತು ಪುಸ್ತಕ ಬಹುಮಾನ” ಪ್ರಶಸ್ತಿ ಪ್ರದಾನ ಸಮಾರಂಭ’ವನ್ನು ಕೋವಿಡ್-19ರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್ ಧರಿಸಿ ಕಡಿಮೆ ಜನರೊಂದಿಗೆ 4 ವಿಭಾಗಗಳಲ್ಲಿ 19 ಜನ ಪ್ರಶಸ್ತಿ ಪುರಷ್ಕೃತರಿಗೆ ಪ್ರಶಸ್ತಿ ಪ್ರದಾನವನ್ನು 2020ರ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗುವುದು.
(ಗಲ್ಪ್ ಕನ್ನಡಿಗ)ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಸಿರಿ ಮತ್ತು ಗೌರವ ಪ್ರಶಸ್ತಿಯನ್ನು ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಾಲ್‍ನಲ್ಲಿ ಅಂಬಾತನಯ ಮುದ್ರಾಡಿ ಉಡುಪಿ, ಮಹಮ್ಮದ್ ಗೌಸ್ ಉಡುಪಿ, ಆರ್ಗೋಡು ಮೋಹನದಾಸ್ ಶೆಣೈ ಕಮಲಶಿಲೆ, ಹಾರಾಡಿ ಸರ್ವ ಗಾಣಿಗ ಹಾಗೂ ನೆಲ್ಲೂರು ಜನಾರ್ಧನ ಆಚಾರ್ಯ ಚಿಕ್ಕಮಗಳೂರು ರವರಿಗೆ ನೀಡಲಾಗುವುದು.
(ಗಲ್ಪ್ ಕನ್ನಡಿಗ) ಯಕ್ಷಸಿರಿ, ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನವನ್ನು ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚಾವಡಿಯಲ್ಲಿ ಚಂದ್ರಶೇಖರ್ ದಾಮ್ಲೆ ಸುಳ್ಯ, ಉಬರಡ್ಕ ಉಮೇಶ ಶೆಟ್ಟಿ ಸುಳ್ಯ, ಕುರಿಯ ಗಣಪತಿ ಶಾಸ್ತ್ರಿ ಕಾಸರಗೋಡು, ಹೊಸ್ತೋಟ ಮಂಜುನಾಥ ಭಗವತ್ -ಶ್ರೀ ಗುರುದೇವ ಪ್ರಕಾಶನ ಒಡೆಯೂರು, ಕೃಷ್ಣಪ್ರಕಾಶ ಉಳಿತ್ತಾಯ ಮಂಗಳೂರು ಇವರಿಗೆ ನೀಡಲಾಗುವುದು.
(ಗಲ್ಪ್ ಕನ್ನಡಿಗ)ಯಕ್ಷಸಿರಿ ಮತ್ತು ಗೌರವ ಪ್ರಶಸ್ತಿಯನ್ನು ಗುಬ್ಬಿ ವೀರಣ್ಣ ರಂಗಮಂದಿರ, ತುಮಕೂರನಲ್ಲಿ ಡಾ. ಆನಂದರಾಮ ಉಪಾಧ್ಯ ಬೆಂಗಳೂರು, ಚಂದ್ರು ಕಾಳೇನಹಳ್ಳಿ ಚನ್ನರಾಯಪಟ್ಟಣ, ಕೆ.ಸಿ.ನಾರಾಯಣ ಬೆಂಗಳೂರು ಗ್ರಾಮಾಂತರ, ಬಿ. ರಾಜಣ್ಣ, ತುಮಕೂರು, ಎ.ಜಿ. ಅಶ್ವತ್ಥ ನಾರಾಯಣ ತುಮಕೂರು, ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ತುಮಕೂರು ಇವರಿಗೆ ನೀಡಲಾಗುವುದು.
(ಗಲ್ಪ್ ಕನ್ನಡಿಗ) ಯಕ್ಷಸಿರಿ ಮತ್ತು ಗೌರವ ಪ್ರಶಸ್ತಿಯನ್ನು ಪುರಭವನ ಕುಮುಟ, ಉತ್ತರ ಕನ್ನಡ ಇಲ್ಲಿ ರಾಮಕೃಷ್ಣ ಗುಂದಿ, ಉತ್ತರ ಕನ್ನಡ, ಮೂರೂರು ರಾಮಚಂದ್ರ ಹೆಗಡೆ, ಎಂ.ಎನ್. ಹೆಗಡೆ ಹಳವಳ್ಳಿ ಉತ್ತರ ಕನ್ನಡ ಇವರಿಗೆ ನೀಡಲಾಗುವುದು ಎಂದು ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರ ಪ್ರೊ.ಎಂ.ಎ ಹೆಗಡೆ ಪ್ರಕಟಣೆ ತಿಳಿಸಿದೆ.
(ಗಲ್ಪ್ ಕನ್ನಡಿಗ)