ತುಪ್ಪದ ಹುಡುಗಿ ಗಾಂಜಾ ಕ್ಕೆ ಬಳಸುತ್ತಿದ್ದ ಕೋಡ್ ವರ್ಡ್ ಯಾವುದು ಗೊತ್ತಾ?- ಏನಿದು ಚಿಕನ್ ಪೀಸ್?
Friday, September 4, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತರಾಗಿರುವ ತುಪ್ಪದ ಹುಡುಗಿ ಖ್ಯಾತಿಯ ರಾಗಿಣಿ ಗಾಂಜಾ ಪಡೆದುಕೊಳ್ಳಲು ಕೋಡ್ ವರ್ಡ್ ಯೂಸ್ ಮಾಡುತ್ತಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಪಬ್ಲಿಕ್ ಟಿವಿ ವರದಿ ಮಾಡಿದೆ.
(ಗಲ್ಫ್ ಕನ್ನಡಿಗ)ಬಂಧಿತ ನಟಿ ರಾಗಿಣಿ ದ್ವಿವೇದಿ ಬಂಧಿತ ಮತ್ತೋರ್ವ ಆರೋಪಿ ರವಿಶಂಕರ್ ಜೊತೆಗೆ ಮಾಡಿರುವ ಚಾಟ್ ನಲ್ಲಿ ಈ ಅಂಶ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ;ತುಪ್ಪ ಬೇಕ ತುಪ್ಪ ಹುಡುಗಿ ರಾಗಿಣಿ ದ್ವಿವೇದಿ ಬಂಧನ
(ಗಲ್ಫ್ ಕನ್ನಡಿಗ)ಮೊಬೈಲ್ ಗೆ 3 ಚಿಕನ್ ಪೀಸ್ , 1 ಖಾಲಿ ಪ್ಲವರ್ ಕಳುಹಿಸಿದ್ರೆ ಕೊಕೈನ್, ಎಂಡಿಎಂಎ , ಎಲ್ ಎಸ್ ಡಿ ರೆಡಿ ಮಾಡಿ ತರಬೇಕು, ಏರೋಪ್ಲೇನ್ ಸಿಂಬಲ್ ಕಳುಹಿಸಿದರೆ ಊರಿಂದ ಹೊರಗಡೆ ಹೋಗುವ ಸಿಗ್ನಲ್, ಸ್ಟಾರ್ ಸಿಂಬಲ್ ಕಳುಹಿಸಿದರೆ ಪ್ಲಾಟ್ ಗೆ ಬರಬೇಕು ಎಂದು, ಥಂಬ್ಸ್ ಅಫ್ ಸಿಗ್ನಲ್ ಸೆಂಡ್ ಮಾಡಿದ್ರೆ ಡ್ರಗ್ ಬೇಕು ಅಂತ ಸಿಗ್ನಲ್ ನ್ನು ಕೋಡ್ ವರ್ಡ್ ನಲ್ಲಿ ಹೇಳಲಾಗುತ್ತಿತ್ತು.
(ಗಲ್ಫ್ ಕನ್ನಡಿಗ)ಈ ವಿಚಾರವನ್ನು ರವಿಶಂಕರ್ ಸಿಸಿಬಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
(ಗಲ್ಫ್ ಕನ್ನಡಿಗ)