ಅಧಿಕಾರವೇ ಕಾಣದಿರುವ ಸುಳ್ಯದಲ್ಲಿ ಕಾಂಗ್ರೆಸ್ ನಲ್ಲಿ ಹೀಗೊಂದು ಭಿನ್ನಮತ; viral ವಿಡಿಯೋ ನೋಡಿ

(ಗಲ್ಫ್ ಕನ್ನಡಿಗ) ಸುಳ್ಯ; ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲವಾಗಿರುವ ಬಿಜೆಪಿ ಎದುರು ಸತತವಾಗಿ ಸೋಲನ್ನ‌ನುಭವಿಸುತ್ತಿರುವ ಕಾಂಗ್ರೆಸ್ ತನ್ನ ಭಿನ್ನಮತದ ಮೂಲಕ ನಗೆಪಾಟೀಲುಗೀಡಾಗಿದೆ.(ಗಲ್ಫ್ ಕನ್ನಡಿಗ) ಸುಳ್ಯದ ಯುವಜನ ಸಂಯುಕ್ತ ಮಂಡಳಿ ಯಲ್ಲಿ ನಿನ್ನೆ ನಡೆದ ಯುವ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ನಾಯಕರ ನಡುವೆ ಅಸಮಾಧಾನ ಸ್ಪೋಟಗೊಂಡು ಅದರ ವಿಡಿಯೋ ವೈರಲ್ ಆಗಿದೆ.

 
(ಗಲ್ಫ್ ಕನ್ನಡಿಗ)ಯುವಕಾಂಗ್ರೆಸ್ ಸಭೆಯಲ್ಲಿ ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡರು ಭಾಷಣ ಮಾಡಲು ಆರಂಭಿಸಿ ನಾವು ಗ್ರಾಮ ಮಟ್ಟದಿಂದಲೇ ಸಂಘಟನೆ ಮಾಡಬೇಕು.‌ಎಲ್ಲಾ ನಾಯಕರು ಕೂಡಾ ಇದಕ್ಕಾಗಿ ಫೀಲ್ಡ್ ಗೆ ಇಳಿಯಬೇಕು ಎಂದು ಹೇಳುತ್ತಿದ್ದ ವೇಳೆ  ವೇದಿಕೆಯಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಧನಂಜಯ ಅಡ್ಪಂಗಾಯರು ಕುಳಿತಲ್ಲಿಂದಲೇ ನೀವು ಅಧ್ಯಕ್ಷರಾಗಿದ್ದಾಗ ಎಷ್ಟು ಸೀಟು ಗೆದ್ದಿದ್ದೀರಾಎಂದು ಪ್ರಶ್ನಿಸಿದರು.

(ಗಲ್ಫ್ ಕನ್ನಡಿಗ) ಅಷ್ಟು ಮಾತ್ರವಲ್ಲದೆ ಎದ್ದು ನಿಂತು ಒಮ್ಮೆ ಪಕ್ಷ ಬಿಟ್ಟು ಹೋದವರನ್ನು ಮತ್ತೆ ನಾವು ಸೇರಿಸಿಕೊಳ್ಳಬಾರದು ಎಂದು ಹೇಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.


(ಗಲ್ಫ್ ಕನ್ನಡಿಗ) ಈ ಮಧ್ಯೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಮತ್ತಿತರ ವೇದಿಕೆಯಲ್ಲಿದ್ದ ನಾಯಕರು ಅಡ್ಪಂಗಾಯರನ್ನು ಸಮಾಧಾನಪಡಿಸಲೆತ್ನಿಸಿದರು.ಆದರೆ ತನಗೆ ಮಾತನಾಡಲು ಅವಕಾಶ ಬೇಕು, ಇಲ್ಲವಾದರೆ ತಾನು ಹೋಗುತ್ತೇನೆ ಎಂದು ಹೇಳಿದರು.

(ಗಲ್ಫ್ ಕನ್ನಡಿಗ)ಯುವಕಾಂಗ್ರೆಸ್ ಸಭೆಯಲ್ಲಿ ನಡೆದ ಈ ಭಿನ್ನಮತದ ವಿಡಿಯೋ ಇದೀಗ ವೈರಲ್ ಆಗಿದೆ.

(ಗಲ್ಫ್ ಕನ್ನಡಿಗ)