-->

ಸುಳ್ಯ ತಾಲೂಕು NSUI ಸಮಿತಿಯ ವತಿಯಿಂದ ಗೂನಡ್ಕದಲ್ಲಿ "ನಮ್ಮೂರ ಹೆಮ್ಮೆ" ಕಾರ್ಯಕ್ರಮಕ್ಕೆ ಮಿಥುನ್ ರೈ ಚಾಲನೆ

ಸುಳ್ಯ ತಾಲೂಕು NSUI ಸಮಿತಿಯ ವತಿಯಿಂದ ಗೂನಡ್ಕದಲ್ಲಿ "ನಮ್ಮೂರ ಹೆಮ್ಮೆ" ಕಾರ್ಯಕ್ರಮಕ್ಕೆ ಮಿಥುನ್ ರೈ ಚಾಲನೆ



(ಗಲ್ಫ್ ಕನ್ನಡಿಗ)ಕರ್ನಾಟಕ ರಾಜ್ಯ NSUI ಸಮಿತಿಯ ವತಿಯಿಂದ SSLC ಹಾಗೂ PUC ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸುವ ನಿಟ್ಟಿನಲ್ಲಿ ನಡೆಯುತ್ತಿರುವ "ನಮ್ಮೂರ ಹೆಮ್ಮೆ" ಕಾರ್ಯಕ್ರಮಕ್ಕೆ ಸುಳ್ಯ ವಿಧಾನಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಪಾಜೆ ಗ್ರಾಮದ ಗೂನಡ್ಕದ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ ಗೂನಡ್ಕರವರ ಕಚೇರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈಯವರು ಸೆಪ್ಪಂಬರ್ 8 ರಂದು ಚಾಲನೆಯನ್ನು ನೀಡಿದರು.
     
(ಗಲ್ಫ್ ಕನ್ನಡಿಗ)ಅತ್ಯಧಿಕ ಅಂಕ ಗಳಿಸಿದ ಭೂಮಿಕ ಜಿ.ಎನ್, ಫಾತಿಮತ್ ಶೈಲಾ, ಪವನ್ ಉಳುವಾರು, ತಸ್ರೀನಾ ಡಿ.ಎಂ, ಜೆಸ್ಮಿತಾ ವೈ, ಶಮ್ಮಾಸ್ ಟಿ.ಜೆ. ಇವರನ್ನು ಸುಳ್ಯ NSUI ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    

(ಗಲ್ಫ್ ಕನ್ನಡಿಗ)ಈ ಸಂದರ್ಭದಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಜಗದೀಶ್ ರೈ, ಜಿ.ಕೆ.ಹಮೀದ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಯುವ ಕಾಂಗ್ರೆಸ್ ಮುಖಂಡರಾದ ಗಿರೀಶ್ ಆಳ್ವ, ವಿಜೇಶ್ ಹಿರಿಯಡ್ಕ, ಅನ್ಸಾರುದ್ದೀನ್ ಸಾಲ್ಮಾರ, ಸಿದ್ದೀಕ್ ಕೊಕ್ಕೊ, ದ.ಕ ಜಿಲ್ಲಾ NSUI ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ಕಾಂಗ್ರೆಸ್ ಮುಖಂಡರುಗಳಾದ ಪ್ರದೀಪ್ ರೈ ಪಾಂಬಾರು, ದಿನಕರ್ ಗೌಡ, ಸೂರಜ್ ಹೊಸೂರು, ಲೂಕಾಸ್ ಟಿ.ಐ. ಸುಳ್ಯ ತಾಲೂಕು NSUI ಉಪಾಧ್ಯಕ್ಷರುಗಳಾದ ಕೀರ್ತನ್ ಗೌಡ, ಆಶಿಕ್ ಅರಂತೋಡು, ಸಹಲ್ ಸೇರಿದಂತೆ  NSUI ಸದಸ್ಯರುಗಳು, ಕಾಂಗ್ರೆಸ್ ಕಾರ್ಯಕರ್ತರು  ಈ ವೇಳೆ ಹಾಜರಿದ್ದರು.

     (ಗಲ್ಫ್ ಕನ್ನಡಿಗ)ದ.ಕ.ಜಿಲ್ಲಾ NSUI ಉಪಾಧ್ಯಕ್ಷರಾದ ಶೌವಾದ್ ಗೂನಡ್ಕರವರು ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪಿ.ಕೆ.ಅಬೂಸಾಲಿಯವರು ವಂದಿಸಿದರು.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99