-->

ಸೆಪ್ಟೆಂಬರ್ 12 ರಂದು ಅರಂತೋಡಿನಲ್ಲಿ ‘ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್’ ಸಮರ್ಪಣೆ

ಸೆಪ್ಟೆಂಬರ್ 12 ರಂದು ಅರಂತೋಡಿನಲ್ಲಿ ‘ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್’ ಸಮರ್ಪಣೆ



ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ ಕೇರಳ ಮತ್ತು ಕರ್ನಾಟಕದಲ್ಲಿ ಕೃಷಿ ಮತ್ತು ಉದ್ಯಮಿಯಾಗಿ,ಕೊಡುಗೈ ದಾನಿಯಾಗಿ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನಾನುರಾಗಿದ್ದ ದಿI ತೆಕ್ಕಿಲ್ ಮೊಹ್ಮದ್ ಹಾಜಿಯವರ ಸ್ಮರಣಾರ್ಥ ಸಂಸ್ಥೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿರುವ ಗಣ್ಯ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡನ್ನು  ನೀಡುತ್ತಾ ಬಂದಿರುತ್ತೇವೆ, ಈ ಹಿಂದೆ ಕೇರಳ ಸರಕಾರದ ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಶಾಫಿಲ್ ಮೆಹೆತ್ತರ್, ಕೇರಳ ರಾಜ್ಯದ ಅಂದಿನ ಕೃಷಿ ಸಚಿವರಾಗಿದ್ದ ಕೆ.ಪಿ.ಮೋಹನ್ ,ನಿವೃತ ಡಿ.ಜಿ.ಪಿ. ಓಂ ಪ್ರಕಾಶ್ ಬೆಂಗಳೂರು, ಅನಿವಾಸಿ ಉದ್ಯಮಿ ರಬೀವುಲ್ಲಾ ಮತ್ತು 2018ರಲ್ಲಿ ಜೋಡುಪಾಲ ನೆರೆ ಸಂತ್ರಸ್ಥತರನ್ನು  ರಕ್ಷಿಸಿದ 16 ಮಂದಿ ಯುವಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.


(ಗಲ್ಫ್ ಕನ್ನಡಿಗ)ಅದರಂತೆ 2019 ನೇ ಸಾಲಿನ ಎಕ್ಸಲೆನ್ಸ್ ಅವಾರ್ಡನ್ನು ಪತ್ರಿಕಾರಂಗದಲ್ಲಿ ಅವಿರತ ಸೇವೆ ಸಲ್ಲಿಸಿದ ಕೇರಳ ರಾಜ್ಯದ ಮಾದ್ಯಮ ಪತ್ರಿಕೆಯ ಮುಖ್ಯ ವರದಿಗಾರರು ಮತ್ತು ಯುನೆಸೆಫ್ ಪ್ರಶಸ್ತಿ ವಿಜೇತರಾದ ರವೀಂದ್ರನ್ ರವನೇಶ್ವರನ್ ಅವರಿಗೆ ಪ್ರಶಸ್ತಿ , ನಗದು ರೂಪಾಯಿ 10.001-/- ಸನ್ಮಾನ ಪತ್ರ ಹಾಗೂ ಸ್ಮರಣಿಕೆ ಯನ್ನು ನೀಡಲಿದ್ದೇವೆ.ಉತ್ತಮ ಬರಹಗಾರರಾಗಿರುವ ಇವರು ಅನೇಕ ಪುಸ್ತಕಗಳನ್ನು ಬರೆದಿರುತ್ತಾರೆ.
ಮಡೆ ಸ್ನಾನ, ಮುಂತಾದ ಅನೇಕ ಲೇಖನಗಳನ್ನು ಬರೆದಿರುವ ಇವರು  ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪ್ರಮುಖವಾಗಿ ಅಂತರಾಷ್ಟ್ರೀಯ ಯುನೇಸೆಫ್ ಪ್ರಶಸ್ತಿ.ಕೇರಳ ರಾಜ್ಯದ ಶಾಲಾ ಸಾಂಸ್ಕೃತಿಕ ಉತ್ಸವದ ವರದಿಗೆ ರಾಜ್ಯ ಸರಕಾರದ  ರಾಜ್ಯ ಪ್ರಶಸ್ತಿ,ಮತ್ತು ಮಲೆಯಾಳ ಮನೋರಮ ಪತ್ರಿಕೆಯ  ಎಂ.ವಿ.ದಾಮೋಧರನ್ ಸ್ಮಾರಕ ಪ್ರಶಸ್ತಿಗಳು ಲಭಿಸಿದೆ. 

(ಗಲ್ಫ್ ಕನ್ನಡಿಗ)ಇವರಿಗೆ ದಿನಾಂಕ 12/09/2020 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇಂದ್ರ ಸರಕಾರದ ನೆಹರು ಯುವ ಕೇಂದ್ರದ ಮಾಜಿ ಮಹಾ ನಿರ್ದೇಶಕರು ಹಾಗೂ  ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಕಾರ್ಯಧ್ಯಕ್ಷ ರಾದ    ಶ್ರೀ ಸಲೀಮ್ ಅಹಮದ್ ರವರು ತೆಕ್ಕಿಲ್ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನ ವತಿಯಿಂದ ಕೊಡಮಾಡುವ ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡನ್ನು ಪತ್ರಕರ್ತ ರವೀಂದ್ರನ್ ರವನೇಶ್ವರನ್ ರವರಿಗೆ ನೀಡಲಿದ್ದಾರೆ.ಅಲ್ಲದೆ ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿ ಯಲ್ಲಿ ತಾಲೂಕಿನಲ್ಲಿ ಪ್ರಥಮ ಮತ್ತು ದ್ವಿತೀಯ ಅಂಕ ಗಳಿಸಿದ  ವಿದ್ಯಾರ್ಥಿಗಳನ್ನು ಮತ್ತು ತೆಕ್ಕಿಲ್ ಶಾಲೆಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕರ್ನಾಟಕ ಸರಕಾರದ ವಿಧಾನ ಪರಿಷತ್ತಿನ ವಿರೋದ ಪಕ್ಷದ ಮುಖ್ಯ ಸಚೆತಕರಾದ ಎಂ. ನಾರಾಯಣ ಸ್ವಾಮಿ  ಸನ್ಮಾನಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಾಹೀದ್ ವಹಿಸಲಿದ್ದಾರೆ.


(ಗಲ್ಫ್ ಕನ್ನಡಿಗ)ಮುಖ್ಯ ಅಥಿತಿಗಳಾಗಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಮೇದಪ್ಪ,ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯಪ್ರಕಾಶ್ ರೈ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ,ಆರ್.ಗಂಗಾಧರ್ ,ಅರಂತೋಡು-ತೊಡಿಕಾನ ವ್ಯವಸಾಯ ಸೇವ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ.ರೈ,ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ವಾಸುದೇವ ಕಟ್ಟಮನೆ, ಅರಂತೋಡು ಪಂಚಾಯತ್ ನ  ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ತೆಕ್ಕಿಲ್ ಶಾಲಾ ಮುಖ್ಯೋಪದ್ಯಾಯ ದಾಮೋಧರ್ ಮಾಸ್ತರ್,ಪಠೇಲ್ ಚಾರಿಟೇಬಲ್ ಅಧ್ಯಕ್ಷ ಬದುರುದ್ದೀನ್ ಮೊದಲಾದವರು  ಭಾಗವಹಿಸಲಿದ್ದಾರೆ ಎಂದು ತೆಕ್ಕಿಲ್ ಪ್ರತಿಷ್ಠಾನ ಕಾರ್ಯದರ್ಶಿ ಅಶ್ರಪ್ ಗುಂಡಿ ಮತ್ತು ಕೋಶಾಧಿಕಾರಿ ಟಿ.ಎಂ.ಜಾವೇದ್.ತೆಕ್ಕಿಲ್. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99