-->

ದಿಕ್ಕು ತಪ್ಪಿದ ಮಾಧ್ಯಮಗಳು: ಒಂದು ವಿಶ್ಲೇಷಣೆ

ದಿಕ್ಕು ತಪ್ಪಿದ ಮಾಧ್ಯಮಗಳು: ಒಂದು ವಿಶ್ಲೇಷಣೆವಿಶ್ಲೇಷಕರು: ಮನೋಜ್ ರಾಚಪ್ಪ, ಹಿರಿಯ ಪತ್ರಕರ್ತರು

ಟಿವಿ ಮಾಧ್ಯಮ ಬದಲಾಗಿದೆ. ಇತ್ತೀಚಿನ ದಿನಗಳ ಬೆಳವಣಿಗೆಗಳನ್ನ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವವರಿಗೆ ಇದರ ಅರಿವಾಗುತ್ತದೆ.. ಟಿವಿ ಮಾಧ್ಯಮ ಇಂದು ದಿಕ್ಕು ತಪ್ಪಿದೆಯಾ ಅನ್ನೋ ಭಾವನೆ ಬರಲಾರಂಭಿಸಿದೆ.. ನಾವಿಂದು ಮಹತ್ತರ ಕಾಲ ಘಟ್ಟದಲ್ಲಿದ್ದೇವೆ.. ಸೋಷಿಯಲ್ ಮೀಡಿಯಾ ಸುದ್ದಿ ಪ್ರಪಂಚವನ್ನ ಆಳುತ್ತಿದೆ.. ಇದರ ನಡುವೆ ನ್ಯೂಸ್ ಚಾನೆಲ್ ಗಳ ಆದ್ಯತೆಗಳು ಬದಲಾಗಿದ್ದು ಮಾತ್ರ ದುರಂತ... ಜನರಿಗೆ ಸುದ್ದಿ ತಲುಪಿಸಬೇಕಾಗಿರುವ ಟಿವಿ ಮಾಧ್ಯಮ, ವಾಟ್ಸಪ್ ಯುನಿವರ್ಸಿಟಿಗೆ ಮತ್ತು ಸೋಷಿಯಲ್ ಮಿಡಿಯಾ ಜೊತೆ ರೇಸ್ ಗಿಳಿದಂತೆ ಕಾಣುತ್ತಿದೆ...

ದೇಶದಲ್ಲಿ ನೂರೆಂಟು ಸಮಸ್ಯೆಗಳು ತಾಂಡವವಾಡುತ್ತಿದೆ.. ಗಡಿಯಲ್ಲಿ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ ತಂಟೆ ತೆಗೆದು ನಮ್ಮ ಸೈನಿಕರ ಮೇಲೆ ಆಕ್ರಮಣ ಮಾಡುತ್ತಿವೆ.. ಇನ್ನೂ ಕಣ್ಣಿಗೆ ಕಾಣದ ಅಗೋಚರ ಶತ್ರು ಡೆಡ್ಲಿ ಕೊರೋನಾ ದೇಶದಲ್ಲಿ ರೌದ್ರನರ್ತನ ಮುಂದುವರೆಸಿದೆ.. 6 ತಿಂಗಳಾದ್ರೂ ಕೊರೋನಾ ದೇಶದಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ.. ವಿಶ್ವದಲ್ಲೇ ಸೋಂಕಿತರ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.. ಕೊರೋನಾ ತಡೆಗೆ ಸರ್ಕಾರಗಳು ಏನು ಮಾಡುತ್ತಿವೆ ಅನ್ನೋದೆ ಗೊತ್ತಾಗುತ್ತಿಲ್ಲ..  ಕೊರೋನಾ ಅಟ್ಟಹಾಸದಿಂದ ದೇಶದ ಆರ್ಥಿಕತೆ ಮಕ್ಕಾಡೆ ಮಲಗಿದೆ.. ಜಿಡಿಪಿ ನಕರಾತ್ಮಕ ಬೆಳವಣಿಗೆ ಕಂಡಿದೆ.. ಅಮೆರಿಕಾ ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳ ಸೇರುತ್ತಿದೆ.. ಇದರ ನಡುವೆ ಜಿಎಸ್ ಟಿ ಸಮಸ್ಯೆ ಬೇರೆ.. ರಾಜ್ಯದ ಜಿಎಸ್ ಟಿ ಪಾಲು ನೀಡಲು ಕೇಂದ್ರದ ಬಳಿ ಹಣ ಇಲ್ಲ. ಬೇಕಿದ್ರೆ, ಇನ್ನೂ ನಿರುದ್ಯೋಗ ಸಮಸ್ಯೆ ಅತ್ಯಧಿಕವಾಗಿದೆ.. ಅಂದಾಜಿನ ಪ್ರಕಾರ ದೇಶದಲ್ಲಿ 21 ಮಿಲಿಯನ್ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಪೆಟ್ರೋಲ್, ಡೀಸೆಲ್ ದರ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದೆ.. ಇವುಗಳ ಜೊತೆ ದೇಶದ ಆಯಾಯ ರಾಜ್ಯಗಳಲ್ಲಿ ನೂರೆಂಟು ಸಮಸ್ಯೆಗಳು.. ಆದ್ರೆ ಗಂಭೀರ ಮತ್ತು ಜ್ವಲಂತ ವಿಚಾರಗಳ ಬಗ್ಗೆ ಟಿವಿ ಮಾಧ್ಯಮಗಳು ಇತ್ತೀಚೆಗೆ ದನಿ ಎತ್ತಿದ್ದು ಕಡಿಮೆ.. ಬಹುಷಃ ಸರ್ಕಾರಗಳ ವಿರುದ್ಧ ದನಿ ಎತ್ತಲಾರಾದಷ್ಟು ಟಿವಿ ಮಾಧ್ಯಮಗಳು ದುರ್ಬಲವಾಗಿಬಿಟ್ಟಿವೆ ಎಂದೆನ್ನಿಸುತ್ತಿದೆ..

ಬಹುತೇಕ ನ್ಯಾಷನಲ್ ನ್ಯೂಸ್ ಚಾನೆಲ್ ಗಳಲ್ಲಿ ಕಳೆದ ಎರಡು ತಿಂಗಳಿನಿಂದ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣವೇ ಪ್ರಮುಖ ಸುದ್ದಿ ಅಂದ್ರೆ ಒಮ್ಮೆ ಯೋಚನೆ ಮಾಡಿ.. ಸುಶಾಂತ್ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವನೇ.. ಆತ ಕೂಡ ಮಾದಕ ವ್ಯಸನಿಯಾಗಿದ್ದ ಅನ್ನೋದು NCB ತನಿಖೆಯಲ್ಲೇ ಬೆಳಕಿಗೆ ಬಂದಿದೆ.. ದೇಶದಲ್ಲಿ ಬೇರೆ ವಿಚಾರಗಳೇ ಇಲ್ಲವೇ..ಈಗ ಸುಶಾಂತ್ ಪ್ರಕರಣದಲ್ಲಿ ಆತನ ಪ್ರೇಯಸಿ ರಿಯಾ ಚಕ್ರವರ್ತಿ ಬಂಧನವಾಗಿದೆ.. ಇನ್ಮೇಲಾದ್ರೂ ದೇಶ ಎದುರಿಸುತ್ತಿರೋ ಗಂಭೀರ ವಿಚಾರಗಳ ಬಗ್ಗೆ ಸುದ್ದಿ ಮಾಡ್ತಾರಾ ಅನ್ನೋದನ್ನ ಕಾದು ನೋಡಬೇಕು..

ಕನ್ನಡ ನ್ಯೂಸ್ ಚಾನೆಲ್ ಗಳ ಹಣೆಬರಹವೂ ಅದೇ.. ಕೆಲವೊಂದು ಕಾರ್ಯಕ್ರಮಗಳು ಟ್ರೋಲ್ ಹೈಕ್ಳ ಗೆ ಸಖತ್ ಆಹಾರವಾಗಿದೆ... ಒಬ್ಬರ ಕಾಲು ಎಳೆಯುತ್ತಾ.. ಇನ್ನೊಬ್ಬರ ತೇಜೋವಧೆ ಮಾಡುತ್ತಾ, ನಾವು ಕೊಟ್ಟಿದ್ದೇ ಬ್ರೇಕಿಂಗ್ ನ್ಯೂಸ್ ಅನ್ನೋ ಮನೋಭಾವನೆ ಬೆಳೆಸಿಕೊಂಡು ದಾಪುಗಾಲಿಡುತ್ತಿರೋ ನ್ಯೂಸ್ ಚಾನೆಲ್ ಗಳು ಎಚ್ಚೆತ್ತುಕೊಳ್ಳತ್ತಿದ್ದರೆ ಅವನತಿ ಖಚಿತ.. ಟಿವಿ ರಿಮೋಟ್ ಇರೋದು ವೀಕ್ಷಕರ ಕೈಯಲ್ಲಿ ಅನ್ನೋದನ್ನ ಮರೆತು ಹೆಜ್ಜೆ ಹಾಕುತ್ತಿದ್ದೇವೆ ನಾವು ಪತ್ರಕರ್ತರು..

ನಾವೇಕೆ ಬದಲಾಗಬಾರದು.. ದನಿ ಇಲ್ಲದವರಿಗೆ ದನಿಯಾಗಿ, ದುರ್ಬಲರಿಗೆ ಶಕ್ತಿಯಾಗಿ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿ, ತಪ್ಪು ದಾರಿ ತುಳಿಯುವ ರಾಜಕಾರಣಿಗಳಿಗೆ ಪಾಠ ಕಲಿಸುವ ಒಬ್ಬ ಶಿಕ್ಷಕನಾಗಿ ನಾವೇಕೆ ಬದಲಾಗಬಾರದು.. ಪತ್ರಕರ್ತರನ್ನು ನಂಬುವ ಅಮಾಯಕ ವೀಕ್ಷಕರು ಇನ್ನೂ ಇದಾರೆ, ಅವರನ್ನು ಕಳೆದುಕೊಳ್ಳುವ ಮುನ್ನ ನಾವೇಕೆ ಬದಲಾಗಬಾರದು..#JUSTASKING

"The sole aim of journalism should be service. The newspaper is a great power, but just as an unchained torrent of water submerges whole countryside and devastates crops, even so an uncontrolled pen serves but to destroy’’. Mahatma Gandhi

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99