ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ: ರಾಗಿಣಿ ಬಳಿಕ ಸಂಜನಾಗೂ ಸಿಸಿಬಿ ಶಾಕ್!


(ಗಲ್ಫ್  ಕನ್ನಡಿಗ)ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯದ ವಿರುದ್ದ  ಕಾರ್ಯಾಚರಣೆಗಿಳಿದಿರುವ ಬೆಂಗಳೂರು ಸಿಸಿಬಿ ಪೊಲೀಸರು ತುಪ್ಪದ ರಾಣಿ ರಾಗಿಣಿ ದ್ವಿವೇದಿ ಬಳಿಕ  ಇದೀಗ  ಪಂಚಭಾಷ ನಟಿ ಸಂಜನಾ ಗಿಲ್ರಾನಿಗೂ ಶಾಕ್ ನೀಡಿದ್ದಾರೆ.

(ಗಲ್ಫ್  ಕನ್ನಡಿಗ)ಇಂದು ಬೆಳ್ಳಂಬೆಳಗ್ಗೆ ಸಂಜನಾ ಗಿಲ್ರಾನಿ ಮನೆಗೆ ದಾಳಿ ಮಾಡಿರುವ ಸಿಸಿಬಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಂಜನಾ ಆಪ್ತ  ರಾಹುಲ್ ಹೇಳಿಕೆ ಆಧಾರದ ಮೇಲೆ  ಬೆಂಗಳೂರಿನ  ಇಂದಿರಾನಗರದ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

(ಗಲ್ಫ್  ಕನ್ನಡಿಗ)ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಮೊನ್ನೆಯೆ ಸಿಸಿಬಿ ಸಂಜನಾಗೆ ನೋಟಿಸ್ ಕೊಡಲು ಸಿದ್ದತೆ ನಡೆಸಿತ್ತು. ಆದರೆ ಸಂಜನಾ ಚಲನವಲನಗಳನ್ನು ಗಮನಿಸಿ ಇಂದು ದಾಳಿ ನಡೆಸಲಾಗಿದೆ.  ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 6 ಕ್ಕೂ ಹೆಚ್ಚು ಸಿಸಿಬಿ ಪೊಲೀಸರ ತಂಡ ಈ ದಾಳಿ ನಡೆಸಿದೆ.

(ಗಲ್ಫ್  ಕನ್ನಡಿಗ)ಸಂಜನಾ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಂಜನಾ ಕಾರನ್ನು  ಸಿಸಿಬಿ ಅಧಿಕಾರಿಗಳು ತಪಾಸಣೆ ಮಾಡಿದ್ದು ತಪಾಸಣೆ ಮುಂದುವರಿದಿದೆ.

(ಗಲ್ಫ್  ಕನ್ನಡಿಗ)