ಕೋಣಾಜೆ ಕಲ್ಲಿಗೆ ಬಂದು ಕಾಡಿನಲ್ಲಿ ಅಲೆದಾಡಿದ ವಿದ್ಯಾರ್ಥಿಗಳು- ಪಾರಾಗಿದ್ದು ಹೇಗೆ?
(ಗಲ್ಪ್ ಕನ್ನಡಿಗ)ಮಂಗಳೂರು: ಮೂಡಬಿದ್ರೆಯ ಕೋನಾಜೆಕ್ಲಲಿಗೆ ಪ್ರವಾಸಕ್ಕೆ ಬಂದ ಮೂಡಬಿದ್ರೆಯ ವಿದ್ಯಾರ್ಥಿಗಳು ಕಾಡಿನಲ್ಲಿ ದಿನವಿಡಿ ಅಲೆದಾಡಿದ ಘಟನೆ ನಡೆದಿದೆ.
(ಗಲ್ಪ್ ಕನ್ನಡಿಗ)ಆದಿತ್ಯವಾರದಂದು ಮೂಡಬಿದ್ರೆ ಕಾಲೇಜಿನಲ್ಲಿ ಕಲಿಯುತ್ತಿರುವ ಕೇರಳ ಮೂಲದ ವಿದ್ಯಾರ್ಥಿಗಳು ಕೋಣಾಜೆಕಲ್ಲಿಗೆ ಬಂದಿದ್ದರು. ಸಂಜೆಯ ವೇಳೆಗೆ ಕೋಣಾಜೆಕಲ್ಲಿಗೆ ಬಂದ ವಿದ್ಯಾರ್ಥಿಗಳಿಗೆ ಹೊರಡುವ ವೇಳೆ ಜೋರಾಗಿ ಸುರಿದ ಮಳೆಯಿಂದ ಹೊರಡಲು ಅಸಾಧ್ಯವಾಗಿತ್ತು. ಆ ಸಂದರ್ಭದಲ್ಲಿ ಸಮೀಪದಲ್ಲಿದ್ದ ಆಶ್ರಮದಲ್ಲಿದ್ದ ಅವರು ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಂದ ಹೊರಟಿದ್ದಾರೆ.
(ಗಲ್ಪ್ ಕನ್ನಡಿಗ)ಅದರೆ ಕತ್ತಲು ಕವಿದ ಕಾರಣ ದಾರಿ ತಪ್ಪಿದ ವಿದ್ಯಾರ್ಥಿಗಳು ಕಾಡು ಸೇರಿದ್ದಾರೆ. ಕಾಡಿನಲ್ಲಿ ವಿದ್ಯಾರ್ಥಿಗಳಿಗೆ ದಾರಿ ತಿಳಿಯದೆ ಪರದಾಡಿದ್ದರು. ವಿದ್ಯಾರ್ಥಿಗಳು ತಮ್ಮ ಇರುವಿಕೆಯನ್ನು ತಿಳಿಸಲು ಕಾಡಿನಲ್ಲಿ ಬೊಬ್ಬೆ ಹಾಕಿದ್ದಾರೆ. ಅವರ ಬೊಬ್ಬೆ ಕೇಳಿ ಸ್ಥಳೀಯರಿಗೆ ಯಾರೋ ಕಾಡಿನಲ್ಲಿ ಸಿಲುಕಿರುವುದು ತಿಳಿದುಬಂದಿದ್ದು ಅವರು ಪೊಲೀಸ್ ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
(ಗಲ್ಪ್ ಕನ್ನಡಿಗ)ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳೀಯ ಜನರ ನೆರವಿನೊಂದಿಗೆ ಬೊಬ್ಬೆ ಬರುತ್ತಿರುವ ಕಡೆಗೆ ಧಾವಿಸಿ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.
(ಗಲ್ಪ್ ಕನ್ನಡಿಗ)