ಒಂದು ದಿನವೂ ರಜೆ ತೆಗೆದುಕೊಳ್ಳದೆ ಮದುವೆಯಾದ ಮಹಿಳಾ ಜಿಲ್ಲಾಧಿಕಾರಿ (Video)
(ಗಲ್ಫ್ ಕನ್ನಡಿಗ)ಅಸ್ಸಾಂ;  ಮದುವೆಯೆಂದರೆ ಹಲವು ದಿನಗಳ ರಜೆ ತೆಗೆದುಕೊಂಡು ಸಂಭ್ರಮಿಸುವ ಕಾಲ. ಐಎಎಸ್ ಅಧಿಕಾರಿಗಳಿಗಂತೂ ಸಾಕಷ್ಟು ರಜೆ ತೆಗೆದುಕೊಳ್ಳುವ  ಅವಕಾಶವಿದೆ. ಮಹಿಳೆಯರಿಗಂತೂ ಮದುವೆಗೆ ಬೇಕಾದ ಸಿದ್ದತೆ ಸೇರಿದಂತೆ ಮದುವೆ ನಂತರದ ಸಂಭ್ರಮಕ್ಕೆ ಹಲವು ದಿನಗಳ ರಜೆ ಬೇಕಾಗುತ್ತವೆ. ಆದರೆ ಅಸ್ಸಾಂ ರಾಜ್ಯದ  ಕಛಾರ್ ಜಿಲ್ಲೆಯ ಜಿಲ್ಲಾಧಿಕಾರಿ ರಜೆಯನ್ನು ತೆಗೆದುಕೊಳ್ಳದೆ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.

(ಗಲ್ಫ್ ಕನ್ನಡಿಗ)ಇವರು ಅಸ್ಸಾಂ ರಾಜ್ಯದ ಕಛಾರ್ ಜಿಲ್ಲೆಯ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ. ಆಂದ್ರಪ್ರದೇಶ  ರಾಜ್ಯದವರಾದ ಇವರು  ಅಸ್ಸಾಂ ರಾಜ್ಯದಲ್ಲಿ  ಸೇವೆ ಸಲ್ಲಿಸುತ್ತಿದ್ದಾರೆ. 2013 ಬ್ಯಾಚ್ ನ ಐಎಎಸ್‌ ಅಧಿಕಾರಿಯಾಗಿರುವ ಇವರು ಕೊರೊನಾ ಕಾರಣದಿಂದ ತಮ್ಮ ಮದುವೆಯನ್ನು ರಜೆಯೆ ಮಾಡದೆ ಸಂಭ್ರಮಿಸಿದ್ದಾರೆ.

(ಗಲ್ಫ್ ಕನ್ನಡಿಗ)ಕೀರ್ತಿ ಜಲ್ಲಿ ಅವರ ಮದುವೆ ಆದಿತ್ಯ ಶಶಿಕಾಂತ್ ಜೊತೆಗೆ ನಿಶ್ಚಯವಾಗಿತ್ತು. ಆದರೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ  ಅವರು ಊರಿಗೆ ಬಂದು ಮದುವೆಯಾಗಲು ತಯಾರಿರಲಿಲ್ಲ. ಅದಕ್ಕಾಗಿ ಅವರು ತಾವು ಕರ್ತವ್ಯ ನಿರ್ವಹಿಸುವ ಜಿಲ್ಲೆಯಲ್ಲಿ ವರನನ್ನು ಕರೆಯಿಸಿ ಮದುವೆಯಾಗಿದ್ದಾರೆ. ಬುಧವಾರದಂದು ಸರಕಾರಿ ರಜೆ ಇರುವ  ದಿನ ಅವರು ಸರಳ ವಿವಾಹವಾಗಿದ್ದಾರೆ. ಮದುವೆಯಲ್ಲಿ ನೇರವಾಗಿ ಇವರ ಪರವಾಗಿ ಪಾಲ್ಗೊಂಡಿದ್ದು ಇವರ ಸಹೋದರಿ ಮಾತ್ರ.

(ಗಲ್ಫ್ ಕನ್ನಡಿಗ)ವರ ಶಶಿಕಾಂತ್ ಅವರು ಮದುವೆಯಲ್ಲಿ ಪಾಲ್ಗೊಳ್ಳಲು ಕೆಲವು ದಿನಗಳ ಮೊದಲೇ ಅಸ್ಸಾಂಗೆ ಬಂದು ಕ್ವಾರಂಟೈನ್ ನಲ್ಲಿದ್ದರು.  ಕ್ವಾರಂಟೈನ್ ಮುಗಿದ ಬಳಿಕ ಅವರಿಬ್ಬರ ಮದುವೆ ನೆರವೇರಿದೆ.

(ಗಲ್ಫ್ ಕನ್ನಡಿಗ)ಮದುವೆಗೆ ಕೀರ್ತಿ ಜಲ್ಲಿ ಅವರ ತಂದೆ ತಾಯಿಗೂ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಕೆಲವು ದಿನಗಳ ಹಿಂದೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆದ ಕಾರಣ ಅವರು ಮದುವೆಯಲ್ಲಿ ಪಾಲ್ಗೊಂಡಿಲ್ಲ.

(ಗಲ್ಫ್ ಕನ್ನಡಿಗ)ಮದುವೆಯನ್ನು ಕೀರ್ತಿ ಜಲ್ಲಿ ಅವರ ತಂದೆ ತಾಯಿ ಸೇರಿದಂತೆ 800 ಕ್ಕೂ ಹೆಚ್ಚು ಮಂದಿ ಝೂಮ್ ಆ್ಯಪ್ ಮೂಲಕ ವೀಕ್ಷಿಸಿದ್ದರು. ಇವರೆಲ್ಲರೂ ಮದುವೆಯಲ್ಲಿ ಪಾಲ್ಗೊಳ್ಳಲು ಹೊಸ ಬಟ್ಟೆ ಧರಿಸಿ ಪಾಲ್ಗೊಂಡಿದ್ದರು.

(ಗಲ್ಫ್ ಕನ್ನಡಿಗ)