ದರೋಡೆ ಮಾಡಲು ವ್ಯಾಪಾರಿ ಮನೆಗೆ ಬಂದ ಕಳ್ಳನಿಗೆ ಏನಾಯ್ತು ಗೊತ್ತಾ?- ಮಜವಾಗಿದೆ ಈ ಸ್ಟೋರಿ
Sunday, September 13, 2020
(ಗಲ್ಫ್ ಕನ್ನಡಿಗ)ಪೂರ್ವ ಗೋಧವರಿ; ಆಂದ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ದರೋಡೆಗೆ ಬಂದ ಕಳ್ಳನೇ ಮೈಮರೆತು ಪೊಲೀಸರ ಅತಿಥಿಯಾಗಿದ್ದಾನೆ.
(ಗಲ್ಫ್ ಕನ್ನಡಿಗ)ಗೋಧಾವರಿ ಜಿಲ್ಲೆಯ ಗೋಖಾವರಂ ನಲ್ಲಿ ಚೌಟುಪಳ್ಳಿ ಸುರೇಶ್ ಎಂಬ ಕಳ್ಳ ವ್ಯಾಪಾರಿಯೊಬ್ಬನ ಮನೆಗೆ ಕಳ್ಳತನಕ್ಕೆ ಬಂದಿದ್ದ. ಮನೆಯ ಒಳಗೆ ಬಂದ ಈತನಿಗೆ ಮನೆಯ ಯಜಮಾನ ಇನ್ನೂ ಮಲಗದಿರುವುದು ಕಂಡಿತು. ಆತನಿಗೆ ಕಾಣಬಾರದೆಂದು ನೇರ ಹೋಗಿ ಮಂಚದ ಅಡಿಯಲ್ಲಿ ಅವಿತು ಕೂತ. ಮಂಚದ ಅಡಿಯಲ್ಲಿ ಅವಿತು ಕೂತ ಕಳ್ಳನಿಗೆ ಕೆಲವೇ ಕ್ಷಣದಲ್ಲಿ ನಿದ್ರಾದೇವಿ ಆವರಿಸಿತು. ಕುಂಭಕರ್ಣನ ನಿದ್ರೆಗೆ ಜಾರಿದ ಕಳ್ಳನಿಗೆ ತಾನು ಬಂದ ಕಾರ್ಯವೇ ಮರೆತುಹೋಗಿ ಮಂಚದಡಿಯಲ್ಲಿ ಸಖತ್ ನಿದ್ದೆ ಮಾಡಿದ್ದಾನೆ.
(ಗಲ್ಫ್ ಕನ್ನಡಿಗ)ಬೆಳಿಗ್ಗೆ ವ್ಯಾಪಾರಿ ಎದ್ದಾಗ ಮಂಚದಡಿಯಲ್ಲಿ ಗೊರಕೆ ಶಬ್ದ ಕೇಳಿಸಿದೆ. ಕೂಡಲೇ ಬಾಗಿಲು ಹಾಕಿ ಪೊಲೀಸ್ ಗೆ ಕರೆ ಮಾಡಿದ್ದಾರೆ. ಪೊಲೀಸ್ ಬಂದಾಗ ಎಚ್ಚರವಾದ ಕಳ್ಳ ನೇರ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
(ಗಲ್ಫ್ ಕನ್ನಡಿಗ)ಕಳ್ಳತನ ಮಾಡಿ ಶ್ರೀಮಂತನಾಗುವ ಕನಸು ಕಂಡಿದ್ದ ಕಳ್ಳ ಇದೀಗ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾನೆ.
(ಗಲ್ಫ್ ಕನ್ನಡಿಗ)