
ಕಡಬದ ಮಳಿಗೆಯಲ್ಲಿ ದಿನದ ಕಲೆಕ್ಷನ್ ನಲ್ಲಿ ವ್ಯತ್ಯಯ; ಸಿಸಿಟಿವಿ ಯಲ್ಲಿ ಬಯಲಾದ ಸತ್ಯ (Video)
ಮಂಗಳೂರು; ಅಂಗಡಿಯಲ್ಲಿ ಮಾರಾಟವಾದ ವಸ್ತುಗಳಿಂದ ಸಂಗ್ರಹವಾದ ಹಣದಲ್ಲಿ ವ್ಯತ್ಯಯ ಬರುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ಮಾಲಕ ಸಿಸಿಟಿವಿ ಅಳವಡಿಸಿ ಸತ್ಯ ಕಂಡುಕೊಂಡಿದ್ದಾರೆ.
ಅಂಗಡಿಯ ಸಿಬ್ಬಂದಿಯೆ ದಿನದ ಕಲೆಕ್ಸನ್ ನಲ್ಲಿ ಹಣ ಎಗರಿಸುತ್ತಿರುವುದು ಪತ್ತೆಯಾಗಿದೆ. ಇದು ನಡೆದದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ದಲ್ಲಿ. ಕಡಬದ ಸಂಗೀತಾ ಎಲೆಕ್ಟ್ರಾನಿಕ್ ಮಳಿಗೆಯಲ್ಲಿ ಈ ಘಟನೆ ನಡೆದಿದೆ.
ಪ್ರತಿದಿನವು ಸಂಗ್ರಹವಾದ ಹಣದಲ್ಲಿ ವ್ಯತ್ಯಾಸ ಬರುತ್ತಿತ್ತು. ಇದರಿಂದ ಅನುಮಾನಗೊಂಡ ಅಂಗಡಿ ಮಾಲೀಕ ಅಂಗಡಿಗೆ ಸಿಸಿಟಿವಿ ಅಳವಡಿಸಿದ್ದಾರೆ. ಇದರಲ್ಲಿ ಅಂಗಡಿಯಲ್ಲಿ ಮಾಲೀಕನಿಲ್ಲದ ವೇಳೆಯಲ್ಲಿ ಸಿಬ್ಬಂದಿ ಹಣ ಎಗರಿಸುತ್ತಿರುವುದು ಪತ್ತೆಯಾಗಿದೆ. ಸಿಬ್ಬಂದಿ ಚಂದ್ರ ಎಂಬವರ ವಿರುದ್ದ ಅಂಗಡಿ ಮಾಲೀಕ ದೂರು ನೀಡಿದ್ದಾರೆ