ಲಾಕ್‌ಡೌನ್‌ ಬಳಿಕ ಬಂಟ ಸಮಾಜ ಪರ ಸೇವೆಗೆ ಹೆಚ್ಚಿನ ಆದ್ಯತೆ : ಐಕಳ ಹರೀಶ್ ಶೆಟ್ಟಿ


ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಭೆ


ಮಂಗಳೂರು: ಕೊರೊನಾ ಸಮಸ್ಯೆಯಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸ್ವಲ್ಪ ಸಮಯ ಕಾರ್ಯ ಚಟುವಟಿಕೆಯಿಂದ ಸ್ಥಗಿತ ಗೊಂಡಿತ್ತು. ಒಕ್ಕೂಟವು ಮತ್ತೆ ಸಮಾಜ ಪರವಾಗಿ ಕೆಲಸ ಮಾಡಲು ಶಕ್ತಿಮೀರಿ ಶ್ರಮಿಸಲಿದೆ. ಕಳೆದ ಒಂದುವರೆ ವರ್ಷದ ಅವಧಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮೂರು ಕೋಟಿ ನಲ್ವತ್ತು ಲಕ್ಷ ರೂಪಾಯಿಗೂ ಮಿಕ್ಕಿ ಹಣವನ್ನು ಸಮಾಜದ ಕೆಲಸ ಕಾರ್ಯಗಳಿಗೆ ವಿನಿಯೋಗಿಸಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.ಬಂಟ್ಸ್ ಹಾಸ್ಟೆಲ್‍ನಲ್ಲಿರುವ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಸದಸ್ಯರ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಐಕಳ ಹರೀಶ್ ಒಕ್ಕೂಟವು ಈಗಾಗಲೇ 2 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ 120 ಮನೆಗಳನ್ನು ನಿರ್ಮಿಸಿದೆ. ಸುಮಾರು 125 ಹೆಣ್ಮಕ್ಕಳಿಗೆ ಮದುವೆಗಾಗಿ 30 ಲಕ್ಷ ರೂಪಾಯಿ ನೀಡಿದೆ. ವಿದ್ಯಾಭ್ಯಾಸಕ್ಕೆ 25 ಲಕ್ಷ ರೂ, ಅನಾಥ ಮಕ್ಕಳ ದತ್ತು ಪಡೆದು 2 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ವೈದ್ಯಕೀಯ ವೆಚ್ಚಕ್ಕಾಗಿ ಸುಮಾರು 250 ಜನರಿಗೆ 50 ಲಕ್ಷ ರೂಪಾಯಿಗೂ ಮಿಕ್ಕಿ ಹಣವನ್ನು ನೀಡಲಾಗಿದೆ ಎಂದರು.ಮುಂದಿನ ದಿನಗಳಲ್ಲಿ ಐಎಎಸ್, ಐಪಿಎಸ್, ಕೆಎಎಸ್, ವಿದ್ಯಾಭ್ಯಾಸ ಪಡೆಯುವ ವಿದ್ಯಾಥಿರ್üಗಳಿಗೆ ಒಕ್ಕೂಟವು ಆಥಿರ್üಕ ನೆರವು ನೀಡಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ 80% ಅಧಿಕ ಅಂಕ ಗಳಿಸಿರುವ ವಿದ್ಯಾಥಿರ್üಗಳಿಗೆ ವಿದ್ಯಾಥಿರ್ü ವೇತನ ಹಾಗೂ ಪ್ರತಿಭಾನ್ವಿತ ವಿದ್ಯಾಥಿರ್üಗಳನ್ನು ಗುರುತಿಸಿ ಗೌರವಿಸಲಾಗುವುದು. ಬಂಟ ಸಮಾಜಕ್ಕೆ ಅನುಕೂಲವಾಗುವಂತೆ 3 ಬಿ ಮೀಸಲಾತಿಯನ್ನು 2ಎ ಗೆ ಪರಿವರ್ತಿಸಲು ಸರಕಾರದ ಮೇಲೆ ಒತ್ತಡ ತರಲಾಗುವುದು. ಇದಕ್ಕಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಬಂಟರ ಯಾನೆ ನಾಡವರ ಮಾತೃ ಸಂಘದೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಐಕಳ ತಿಳಿಸಿದರು.ಈ ಸಂದರ್ಭದಲ್ಲಿ ಸಮಾಜ ಸೇವಕರೂ, ಕೊಡುಗೈದಾನಿಗಳಾದ ಕೃಷ್ಣ ಪ್ಯಾಲೇಸ್ ಮುಂಬಯಿ ಇದರ ಪ್ರವರ್ತಕರಾದ ಕೃಷ್ಣ ವೈ.ಶೆಟ್ಟಿ ಮತ್ತು ಉಮಾ ಕೃಷ್ಣ ಶೆಟ್ಟಿ ದಂಪತಿಯನ್ನು ಸನ್ಮಾನಿಸಿ, ಬಾಹ್ರೇಯ್ನ್ ಬಂಟರ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ, ಶಶಿಧರ ಶೆಟ್ಟಿ ಹಾಗೂ ಉಪಸ್ಥಿತ ವಿವಿಧ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ಒಕ್ಕೂಟದ ಪರವಾಗಿ ಗೌರವಿಸಲಾಯಿತು.ಒಕ್ಕೂಟವು ಸಮಾಜದ ಪರವಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ಹೆಮ್ಮೆಯಾಗುತ್ತಿದೆ. ಒಕ್ಕೂಟದ ಜನಪರ ಕೆಲಸಗಳಿಗೆ ತಾವು ಯಾವಾಗಲೂ ಕೈ ಜೋಡಿಸುತ್ತೇವೆ ಎಂದು ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಉಪ ಕಾರ್ಯದರ್ಶಿ ಉಮಾ ಶೆಟ್ಟಿ ತಿಳಿಸಿದರು.


ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಒಕ್ಕೂಟವು ಮುಂದೆ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮದ ಕುರಿತು ಸಭೆಗೆ ಮಾಹಿತಿ ನೀಡಿದರು. ಈ ಬಾರಿ ನಿಧನರಾದ ಸಮಾಜದ ಗಣ್ಯರಿಗೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ


ಪ್ರಿನ್ಸಿಪಾಲ್ ಬಾಲಕೃಷ್ಣ ಶೆಟ್ಟಿ, ಡಾ| ಆಶಾಜ್ಯೋತಿ ರೈ, ವಸಂತ ಶೆಟ್ಟಿ, ಕೃಷ್ಣ ಪ್ರಸಾದ ರೈ, ಕಾವು ಹೇಮನಾಥ ಶೆಟ್ಟಿ, ಪುಷ್ಪರಾಜ ಶೆಟ್ಟಿ ಕುಡುಂಬೂರು, ಥಾಣೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಮುಲ್ಕಿ ಸಂತೋಷ್ ಕುಮಾರ್ ಹೆಗ್ಡೆ, ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಸಭೆಯಲ್ಲಿದ್ದು ಸಲಹೆಗಳನ್ನಿತ್ತರು. ಒಕ್ಕೂಟದ ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ವಂದಿಸಿದರು.