ಸಂಸದ ಅನಂತಕುಮಾರ್ ಹೆಗಡೆಗೆ ಕೊರೊನಾ ಪಾಸಿಟಿವ್; ತಿಂಗಳ ಹಿಂದೆ ಕೊರೊನಾ ಎಂಬ ಭೂತ ಸೃಷ್ಟಿಸಲಾಗಿದೆ ಎಂದಿದ್ದ ವಿಡಿಯೋ ಇಲ್ಲಿದೆ ( video)
Monday, September 14, 2020
(ಗಲ್ಫ್ ಕನ್ನಡಿಗ)ಕಾರವಾರ; ಉತ್ತರ ಕನ್ನಡ ಸಂಸದ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಕೊರೊನಾ ದೃಢಪಟ್ಟಿದೆ.
(ಗಲ್ಫ್ ಕನ್ನಡಿಗ)ಲೋಕಸಭೆಯಲ್ಲಿ ಮುಂಗಾರು ಅಧಿವೇಶನಕ್ಕೆ ಆಗಮಿಸಿದ ಸಂಸದ ಅನಂತಕುಮಾರ್ ಹೆಗಡೆಯವರನ್ನು ತಪಾಸಣೆ ನಡೆಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇಂದು ಸಂಸತ್ ಅಧಿವೇಶನಕ್ಕೆ ಮುನ್ನ ತಪಾಸಣೆ ನಡೆಸಿದಾಗ ಅನಂತಕುಮಾರ್ ಹೆಗಡೆ ಸೇರಿ 17 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಕೊರೊನಾ ಎಂಬ ಭೂತ ಸೃಷ್ಟಿಸಲಾಗಿದೆ ಎಂದಿದ್ದರು!
(ಗಲ್ಫ್ ಕನ್ನಡಿಗ)ತಿಂಗಳ ಹಿಂದೆ ಸಾರ್ವಜನಿಕ ಭಾಷಣದಲ್ಲಿ ಅನಂತಕುಮಾರ್ ಹೆಗಡೆ ಕೊರೊನಾ ಎಂಬ ದೊಡ್ಡ ಭೂತವನ್ನು ಸೃಷ್ಟಿಸಲಾಗಿದೆ. ಯಾರಿಗೆ ನೆಗಡಿ ಆದರೂ ಬಹುತೇಕ ಪಾಸಿಟಿವ್ ಕಾಣಿಸಿಕೊಳ್ಳುತ್ತೆ ಎಂದಿದ್ದರು.
ಇದಕ್ಕೆ ಯಾರೂ ಕೂಡ ಹೆದರಬೇಕಾದ ಅವಶ್ಯಕತೆ ಇಲ್ಲ. ಫಾರ್ಮಸ್ಸಿಟಿಕ್ ಲಾಬಿ ಯಿಂದ ಹಣ ಮಾಡುವ ಉದ್ದೇಶಕ್ಕೆ ಇದನ್ನು ದೊಡ್ಡದು ಮಾಡಲಾಗುತ್ತಿದೆ. ಅವರಿಗೆ ದುಡ್ಡು ಮಾಡಬೇಕಾಗಿದ್ದು ಹಾಗಾಗಿ ಈ ಭೂತಗಳನ್ನು ಕುಣಿಸುತ್ತಾ ಇದ್ದಾರೆ ಎಂದು ಹೇಳಿದ್ದರು.
(ಗಲ್ಫ್ ಕನ್ನಡಿಗ)