ಪವರ್ ಟಿವಿ ಬಂದ್ ಮಾಡಿದ ಪ್ರಕರಣ- ಹಿರಿಯ ಪತ್ರಕರ್ತ ರವಿಕುಮಾರ್ ಟೆಲೆಕ್ಸ್ ಅವರ ಅಭಿಪ್ರಾಯ ಇದು....
Tuesday, September 29, 2020
ಎನ್. ರವಿಕುಮಾರ್ ಟೆಲೆಕ್ಸ್
ಪವರ್ ಟಿವಿ ಪ್ರಸಾರವನ್ನು ಜಪ್ತಿ ಮಾಡಿದ ಕ್ರಮ ಕೇವಲ ಆ ನ್ಯೂಸ್ ಚಾನಲ್ ಗೆ ಸಂಬಂಧಿಸಿದ ಸಂಗತಿ ಎಂದು ಪತ್ರಕರ್ತರಾದವರು ಸುಮ್ಮನಿರುವಂತಿಲ್ಲ. ಇದು ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರದಲ್ಲೂ ಇಂತಹ ಅತಿರೇಕದ ಕ್ರಮಗಳು ಜಾರಿಯಾಗಿ ಹಗೆ ಸಾಧಿಸುವ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಹತ್ತಿಕ್ಕಲು ದಾರಿಯಾಗಬಹುದು. ಇಂತಹಎಚ್ಚರಿಕೆಗಳಿಂದ ಈ ಘಟನೆಯನ್ನು ಪತ್ರಕರ್ತರಾದವರು ಪ್ರಶ್ನಿಸುವುದು ಹೊಣೆಗಾರಿಕೆ ಯ ಕೆಲಸ.
ಹೌದು. ದುಡ್ಡಿನಕುಳಗಳು, ವಂಚನೆಯೇ ಉದ್ಯೋಗವಾಗಿರುವವರು, ವ್ಯಾಪಾರಿಗಳು, ಸುಲಭ ಮಾರ್ಗವಾಗಿ ಹಣ ಗಳಿಸುವ ಉದ್ದೇಶದಿಂದಲೂ ಇಂದು ಮಾಧ್ಯಮ ಕ್ಷೇತ್ರಕ್ಕೆ ಲಗ್ಗೆ ಹಾಕುತ್ತಿದ್ದಾರೆ , ಹಾಕಿದ್ದಾರೆ ಕೂಡ.
ಇಂತಹವರಿಂದ ಓಮ್ಮೊಮ್ಮೆ ಅದ್ವಾನಗಳು ನಡೆದು ಹೋಗುತ್ತವೆ. ಹಾಗಂತ ಅಂತಹ ವಾಹಿನಿಯನ್ನು ಕಾನೂನು ಬಾಹಿರವಾಗಿಯೇ ಮುಚ್ಚಿಸುವ ಹತ್ತಿಕ್ಕುವ ಕ್ರಮಗಳು ಸರಿಯಲ್ಲ. ಇಂತಹ ಕ್ರಮಗಳನ್ನು ಇಂದು ಸಮರ್ಥಿಸುವ, ಬೆಂಬಲಿಸುವ ಇಲ್ಲವೆ ಪ್ರಶ್ನಿಸದೆ ಇರುವುದು ಭವಿಷ್ಯದಲ್ಲಿ ಮಾಧ್ಯಮಕ್ಷೇತ್ರಕ್ಕೆ ಮಾರಕವಾಗಬಹುದು.
ಮೂರು ವರ್ಷದ ಹಿಂದೆ ಹಾಸನದಲ್ಲಿ ನಡೆದ kuwj ಸಮ್ಮೇಳನದಲ್ಲಿ ಅತಿಥಿಯಾಗಿದ್ದ ಸುದ್ದಿವಾಹಿನಿಯ ಸಂಪಾದಕರನ್ನು ಮಾಜಿ ಪ್ರಧಾನಿ ದೇವೇಗೌಡರು ಚಾನಲ್ ಮಾಡೋಕೆ 300 ಕೋ ರೂ ಎಲ್ಲಿಂದ ಬಂತು ಎಂದು
' ಪಬ್ಲಿಕ್' ಆಗಿ ಪ್ರಶ್ನಿಸಿದ್ದರು. ಸಂಪಾದಕರು ಕುಂತ ಕುರ್ಚಿಯಲ್ಲೇ ಅವುಚಿಕೊಂಡಿದ್ದರು. ಆಡಿಟೋರಿಯಂ ತುಂಬಾ ಚಪ್ಪಾಳೆಗಳು ಗಡಚಿಕ್ಕಿದವು. ಇದರರ್ಥ ಮಾಧ್ಯಮಗಳ ಬಗೆಗಿನ ವಿಶ್ವಾಸರ್ಹತೆಯನ್ನು ಪ್ರಶ್ನಿಸುವಂತಿತ್ತು.
ಹಿಂದೆ ಗೃಹ ಸಚಿವರಾಗಿದ್ದ ಆಚಾರ್ಯ ಅವರು ಮಾಧ್ಯಮಗಳ ನಿಯಂತ್ರಣಕ್ಕೆ ಓಂಬಡ್ ಮನ್ ನೇಮಕ ಮಾಡುವ ಘೋಷಣೆ ಕೂಡ ಮಾಡಿದ್ದು ನಂತರ ತೀವ್ರ ಪ್ರತಿ ಭಟನೆ ಕಾರಣ ಕೈಬಿಟ್ಟರು. ಇದು ಯಾಕೆ ಎನ್ನುವುದು ಅವತ್ತಿನ ಬಿಜೆಪಿ ಸರ್ಕಾರದ ಒಳಗುಟ್ಟಾಗಿ ಉಳಿದಿತ್ತು.
ಎಲ್ಲಾ ಕಾಲಘಟ್ಟದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನುಹತ್ತಿಕ್ಕುವ ಕೆಲಸ ನಡೆಯುತ್ತಲೆ ಇರುತ್ತವೆ. ಹಾಗಂತ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ರಾಕೇಶ್ ಶೆಟ್ಟಿಯಂತ ಅನೇಕ ನ್ಯೂಸ್ ಚಾನಲ್ ಗಳ ಕೂಗುಮಾರಿ ಗಳ ಸ್ವೇಚ್ಛಾಚಾರವೂ ಆಗಿರಬಾರದು. ಎಂಬ ಎಚ್ಚರಿಕೆಯನ್ನು ನ್ಯೂಸ್ ಚಾನಲ್ ಗಳು ವವಹಿಸಬೇಕು