ಬಾಲಿವುಡ್ ನಟ ಕಿಶೋರ್ ಶೆಟ್ಟಿ ಬಂಧನ ಪ್ರಕರಣ; ನೈಜಿರಿಯಾ ಪ್ರಜೆ ಸೇರಿದಂತೆ ಮೂವರನ್ನು ಬಂಧಿಸಿದ ಮಂಗಳೂರು ಪೊಲೀಸರು

(ಗಲ್ಪ್ ಕನ್ನಡಿಗ)ಮಂಗಳೂರು; ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ ಬೆನ್ನತ್ತಿರುವ ಪೊಲೀಸರು ನೈಜಿರಿಯಾ ಪ್ರಜೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. 


(ಗಲ್ಪ್ ಕನ್ನಡಿಗ)ಒಬ್ಬನನ್ನು ಮುಂಬಯಿನಲ್ಲಿ ಬಂಧಿಸಲಾಗಿದ್ದರೆ ಮತ್ತಿಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಇವರು ಗೋವ ಮತ್ತು ಮುಂಬಯಿನಿಂದ ಡ್ರಗ್ಸ್ ಮಂಗಳೂರಿಗೆ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.

(ಗಲ್ಪ್ ಕನ್ನಡಿಗ)ಮುಂಬಯಿನಲ್ಲಿ ಮಂಗಳೂರಿನ ಬೆಂಗರೆ ನಿವಾಸಿ ಶಾನ್ ನವಾಝ್ ನನ್ನು ಬಂಧಿಸಲಾಗಿದ್ದರೆ  ಬೆಂಗಳೂರಿನಲ್ಲಿ ನೈಜಿರಿಯಾ ಪ್ರಜೆ ಮತ್ತು ಕೆಂಗೇರಿ ನಿವಾಸಿ ಶಾಮ್ ಎಂಬಾತನನ್ನು ಬಂಧಿಸಲಾಗಿದೆ.

(ಗಲ್ಪ್ ಕನ್ನಡಿಗ)ಕಿಶೋರ್ ಶೆಟ್ಟಿ ಬಂಧನದ ಬಳಿಕ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.
(ಗಲ್ಪ್ ಕನ್ನಡಿಗ)