ಮಗಳು ಜಾನಕಿಯ ಟಿ ಎನ್ ಸೀತಾರಾಂ ಹೆಸರಿನಲ್ಲಿ ಬಂತು ನಕಲಿ ಫೇಸ್‌ಬುಕ್ ಖಾತೆ; ನಿಮಗೂ ಬರಬಹುದು ಪ್ರೆಂಡ್ ರಿಕ್ವೆಸ್ಟ್!
Sunday, September 27, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಹಿರಿಯ ಕಲಾವಿದ , ನಿರ್ದೇಶಕ ಮುಕ್ತ, ಮನ್ವಂತರ, ಮಗಳು ಜಾನಕಿಯಂತಹ ಅದ್ಬುತ ಧಾರವಾಹಿಯ ಮೂಲಕ ಮನೆಮಾತಾಗಿರುವ ಟಿ ಎನ್ ಸೀತಾರಾಂ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಯಾಗಿದೆ.
(ಗಲ್ಫ್ ಕನ್ನಡಿಗ)ಟಿ ಎನ್ ಸೀತಾರಾಂ ಅವರ Seetharam Talagavar ನೈಜ ಫೇಸ್ ಬುಕ್ ಖಾತೆಯನ್ನು ಹೋಲುವಂತೆ ಫೇಸ್ ಬುಕ್ ಖಾತೆ ತೆರೆಯಲಾಗಿದೆ. ಟಿ ಎನ್ ಸೀತಾರಾಂ ನಕಲಿ ಖಾತೆ (Seetharam Talagavar ) ಯಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪ್ರೆಂಡ್ ಶಿಪ್ ಬೆಳೆಸಿ ಹಣದ ಅಗತ್ಯವಿದೆ ಎಂದು ವಿನಂತಿಸಲಾಗುತ್ತಿದೆ. ಟಿ ಎನ್ ಸೀತಾರಾಂ ಅವರೆ ಹಣ ಕೇಳುತ್ತಿದ್ದಾರೆ ಎಂದು ಜನರು ಹಣ ಕಳುಹಿಸುವ ಅಪಾಯವಿದ್ದು ಈ ಬಗ್ಗೆ ಟಿ ಎನ್ ಸೀತಾರಾಂ ಅವರೆ ತಮ್ಮ ನೈಜಖಾತೆಯಲ್ಲಿ ಈ ಕೆಳಗಿನಂತೆ ಬರೆದಿದ್ದಾರೆ.
(ಗಲ್ಫ್ ಕನ್ನಡಿಗ)ನನ್ನ ಫೇಸ್ಬುಕ್ ಖಾತೆಯನ್ನು ನಕಲುಮಾಡಿ ನನ್ನ ಹೆಸರಿನ ನಕಲೀ ಖಾತೆಯನ್ನು ಸೃಷ್ಟಿಸಿ ಯಾರೋ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಮಾಹಿತಿ ಬರುತ್ತಿದೆ...ಹಣವನ್ನೂ ಕೇಳುತ್ತಿದ್ದಾರೆಂದೂ ಹೇಳುತ್ತಿದ್ದಾರೆ
ನನ್ನ ಹೆಸರಿನಲ್ಲಿ ಯಾರಿಗಾದರೂ ಏನಾದರೂ ಸಂದೇಶಗಳು ಬಂದಿದ್ದಲ್ಲಿ ಅದನ್ನು ನಂಬಬೇಡಿ ಹಾಗೂ ನಿರ್ಲಕ್ಷಿಸಿ.
ಇದರ ಬಗ್ಗೆ ನಾನು ಸಂಬಂಧ ಪಟ್ಟ ಪೋಲೀಸರಿಗೆ ದೂರು ಕೊಡುತ್ತಿದದ್ದೇನೆ.
ಯಾರೂ ಯವರೀತಿಯ ವ್ಯವಹಾರವನ್ನೂ ದಯವಿಟ್ಟು ಇಟ್ಟುಕೊಳ್ಳಬೇಡಿ
(ಗಲ್ಫ್ ಕನ್ನಡಿಗ)Seetharam Talagavar ಹೆಸರಿನ ನಕಲಿ ಖಾತೆಯಿಂದ ಪ್ರೆಂಡ್ ರಿಕ್ವೆಸ್ಟ್ ಬಂದರೆ ಅದನ್ನು ನಿರ್ಲಕ್ಷಿಸುವಂತೆ ವಿನಂತಿಸಲಾಗಿದೆ.
(ಗಲ್ಫ್ ಕನ್ನಡಿಗ)