ಅತಿವೃಷ್ಠಿ ಬಾಧಿತ ತಾಲೂಕುಗಳ ಪಟ್ಟಿಯಲ್ಲಿ ಸುಳ್ಯ ನಾಪತ್ತೆ!: ಏಕೆ ಹೀಗೆ ಎಂದು ಕೇಳ್ತಾರೆ ಸುಳ್ಯದ ಜನ
ಸುಳ್ಯ: ಇಡೀ ರಾಜ್ಯದಲ್ಲಿ ಮಲೆನಾಡು ಪ್ರದೇಶಗಳಲ್ಲಿ ಮಳೆ ಹೆಚ್ಚು ಎಂದು ತಾಂತ್ರಿಕ ಅನಕ್ಷರಸ್ಥನೂ ಹೇಳಬಲ್ಲ. ಆದರೆ ಸರಕಾರದ ಪ್ರಕಾರ ಅತಿವೃಷ್ಟಿ ಪೀಡಿತ ಪ್ರದೇಶದಲ್ಲಿ ಸುಳ್ಯ ತಾಲೂಕು ಬಿಟ್ಟು ಉಳಿದೆಲ್ಲಾ ತಾಲೂಕು ಇದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅತಿವೃಷ್ಟಿ ಪೀಡಿತ ತಾಲೂಕಿಗೆ ಪ್ರತೀ ವರ್ಷ ಒಂದಷ್ಟು ಅನುದಾನವೂ ಲಭ್ಯವಾಗುತ್ತದೆ. ಸುಳ್ಯ ಯಾಕೆ ಕೈಬಿಡಲಾಯಿತು ಗೊತ್ತಿಲ್ಲ. ಇಲ್ಲಿನ ಕೃಷಿಕರೇ ಅನೇಕರು ಮಳೆ ಲೆಕ್ಕ ಹಾಕುತ್ತಾರೆ, ಅದರ ಪ್ರಕಾರವೂ ಮಳೆ ಜಾಸ್ತಿ ಇದೆ. ಗೊತ್ತಿಲ್ಲ ಅದ್ಯಾಕೆ ಹೀಗಾಯಿತು ಅಂತ. ಅದಕ್ಕೆ ಕಾರಣದ ಮುನ್ನ ನನ್ನ ಅಭಿಪ್ರಾಯ ಹೀಗಿದೆ.....
ಸುಳ್ಯ ಯಾವ "ಲೆಕ್ಕಕ್ಕೂ" ಇಲ್ಲ ಎನ್ನುವುದು ಮತ್ತೆ ಸಾಬೀತಾಯಿತು. ಇಲ್ಲಿನ ಶಾಸಕಾಂಗದ ನಿರ್ಲಕ್ಷ್ಯ ಮತ್ತೆ ಎದ್ದು ಕಾಣುತ್ತಿದೆ. ಇಲ್ಲಿ ಯಾವುದೇ ಅಭಿವೃದ್ಧಿ ಬಗ್ಗೆ ಮಾತನಾಡಬಾರದು, ಎಲ್ಲವೂ "ನಾವೇ" ಎನ್ನುವುದು ಕಾಣುತ್ತದೆ. ಆದರೆ ಪ್ರತೀ ಬಾರಿಯೂ ಇಂತಹದ್ದೇ ಲೋಪ ಕಾಣುತ್ತದೆ.
ಇಲ್ಲಿ ಯಾವುದೋ ಗುಂಪುಗಾರಿಕೆ, ಗುಂಪು ರಾಜಕೀಯ ಮಾಡಲು ಉತ್ಸಾಹ ಕಾಣುತ್ತದೆ. ಇಲ್ಲಿ ಪ್ರಶ್ನೆ ಮಾಡುವವರೂ ಕಾಣುತ್ತಿಲ್ಲ. ಪ್ರಶ್ನೆ ಮಾಡಿದವರು, ಮಾಡುವವರು, ರಚನಾತ್ಮಕ ಸಲಹೆ ನೀಡುವವರು ಕಮ್ಯುನಿಸ್ಟರಾಗುತ್ತಾರೆ.
ನಮ್ಮದೊಂದು ರಸ್ತೆ ಇದೆ ಅದು ಮಳೆಗೆ ಹಾನಿಯಾಗಿದೆ ಎನ್ನುವುದು ನಮ್ಮಲ್ಲಿ ಹೋಗುವ ತಾಂತ್ರಿಕ ಅನಕ್ಷರಸ್ಥ ಕೂಡಾ ಹೇಳುತ್ತಾನೆ. ಆದರೆ ಇವರಿಗೆ ಮಳೆ ಕಡಿಮೆ....!! ಅದೇ ಸರಕಾರದ ಇಲಾಖೆಯೊಂದು ಮಳೆ ಹೆಚ್ಚಾಗಿ ರಸ್ತೆ ಹಾಳಾಗಿದೆ ಎನ್ನುತ್ತದೆ. ಆದರೆ ಮಳೆ ಹೆಚ್ಚಾಗಿರುವ ಪಟ್ಟಿಯಲ್ಲಿ ಸುಳ್ಯ ಇಲ್ಲ...!!!