ಕಾರವಾರದಲ್ಲಿ ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಪದ್ಮಶ್ರೀ ವಿಜೇತೆ ವಿರೋಧ


(ಗಲ್ಫ್ ಕನ್ನಡಿಗ)ಕಾರವಾರ; ಕಾರವಾರದಲ್ಲಿ ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಪದ್ಮಶ್ರೀ ವಿಜೇತೆ ಸುಕ್ರಿಗೌಡ ವಿರೋಧ ವ್ಯಕ್ತಪಡಿಸಿದ್ದಾರೆ.

(ಗಲ್ಫ್ ಕನ್ನಡಿಗ)ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಲಗೇರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಈ  ಸ್ಥಳ ಸೂಕ್ತವಲ್ಲ. ಇದರಿಂದ ಅಗೇರ, ಹಾಲಕ್ಕಿ ಸಮುದಾಯದ ಬಹಳಷ್ಟು ಮಂದಿ ಸಮಸ್ಯೆ ಅನುಭವಿಸುತ್ತಾರೆ ಎಂದರು.

(ಗಲ್ಫ್ ಕನ್ನಡಿಗ)ವಿಮಾನ ನಿಲ್ದಾಣ ನಿರ್ಮಿಸುವುದಕ್ಕೆ ನಮ್ಮ ವಿರೋಧವಲ್ಲ. ಅಲಗೇರಿಯ ಬದಲು  ನೆಲ್ಲೂರಿನಲ್ಲಿ ಮಾಡಿ ಎಂದು ಅವರು ಒತ್ತಾಯಿಸಿದ್ದಾರೆ.

(ಗಲ್ಫ್ ಕನ್ನಡಿಗ)