ರಾಗಿಣಿ ಭೇಟಿಗೆ ತಾಯಿ ತಂದೆಗೂ ಅವಕಾಶವಿಲ್ಲ.. ಏಕೆ ಗೊತ್ತಾ?
(ಗಲ್ಫ್ ಕನ್ನಡಿಗ)ಬೆಂಗಳೂರು; ಸ್ಯಾಂಡಲ್ ವುಡ್ ಡ್ರಗ್ ಮಾಫಿಯದ ಬೆನ್ನತ್ತಿರುವ ಪೊಲೀಸರು ರಾಗಿಣಿಯನ್ನು ಅರೆಸ್ಟ್ ಮಾಡಿ ದಿನಗಳೆ ಕಳೆದಿದೆ. ರಾಗಿಣಿ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ಆದರೆ ಜೈಲಿನಲ್ಲಿರುವ ರಾಗಿಣಿಯನ್ನು ನೋಡಲು ತಾಯಿ ತಂದೆಗೂ ಅವಕಾಶವಿಲ್ಲದಾಗಿದೆ. ಇದಕ್ಕೆ ಕಾರಣ ಕೊರೊನಾ ಭಯ!

(ಗಲ್ಫ್ ಕನ್ನಡಿಗ)ಕೊರೊನಾ ಹಿನ್ನೆಲೆಯಲ್ಲಿ ಕೈದಿಗಳ ಸಂದರ್ಶನವನ್ನು ರದ್ದು ಪಡಿಸಲಾಗಿದೆ. ಹೀಗಾಗಿ ರಾಗಿಣಿಯನ್ನು ಕಾಣಲು ಬಂದ ತಂದೆ ತಾಯಿಗೂ ಅವಕಾಶ ಸಿಕ್ಕಿಲ್ಲ. 

(ಗಲ್ಫ್ ಕನ್ನಡಿಗ)ರಾಗಿಣಿ ತಂದೆ ರಾಕೇಶ್ ಕುಮಾರ್ ದ್ವಿವೇದಿ, ತಾಯಿ ರೋಹಿಣಿ ದ್ವಿವೇದಿ, ಸಹೋದರ ರುದ್ರಕ್ಷಾ ದ್ವಿವೇದಿ ರಾಗಿಣಿಯನ್ನು ಭೇಟಿ ಮಾಡಲು ಜೈಲಿಗೆ ಬಂದಿದ್ದರು. ಆದರೆ ಅವಕಾಶ ಇಲ್ಲದೆ ಇರುವುದರಿಂದ ಜೈಲು ಹೊರಗೆ ಕಣ್ಣೀರಿಟ್ಟು ಮನೆಗೆ ತೆರಳಿದ್ದಾರೆ.

(ಗಲ್ಫ್ ಕನ್ನಡಿಗ)ಸೋಮವಾರ ರಾತ್ರಿ ಜೈಲು ಸೇರಿದ ರಾಗಿಣಿ ನಿಯಮದಂತೆ  ಕಾರಾಗೃಹ ಆವರಣದ  ಹೊಸ ಕಟ್ಟಡದ ಬ್ಯಾರಕ್ ನಲ್ಲಿ 21 ದಿನಗಳ ಕಡ್ಡಾಯ ಕ್ವಾರಂಟೈನ್ ನಲ್ಲಿರಬೇಕಾಗಿದೆ. ಮೊದಲ ಬಾರಿಗೆ ಜೈಲೂಟ ಸೇವಿಸಿದ ಅವರು ಕೆಲಹೊತ್ತು ಮೌನಕ್ಕೆ ಜಾರಿದರು. ಬಳಿಕ ಕಾರ ಗೃಹದ ಸಿಬ್ಬಂದಿಗಳ ಮತ್ತು ಬ್ಯಾರಕ್ ನಲ್ಲಿರುವ ಇತರ ಕೈದಿಗಳ ಜೊತೆಗೆ ಹರಟುತ್ತಾ ಸಮಯ ದೂಡಿದ್ದಾರೆ . ಮೊದಲು ಆಹಾರ ತೆಗೆದುಕೊಳ್ಳಲು ನಿರಾಕರಿಸಿದ ರಾಗಿಣಿ ವೈದ್ಯರ ಸಲಹೆ ಮೇರೆಗೆ ಜೈಲಿನ ಚಿತ್ರಾನ್ನ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.

(ಗಲ್ಫ್ ಕನ್ನಡಿಗ)ಜೈಲಿನಿಂದ ಹೋಗುವ ಮುಂಚೆ ಮಾಧ್ಯಮ ದೊಂದಿಗೆ ಮಾತನಾಡಿದ ರಾಗಿಣಿ ತಾಯಿ ರಾಗಿಣಿ ಹೆಣ್ಣು ಸಿಂಹ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದಿದ್ದಾರೆ. ಹಲವು ವರ್ಷಗಳಿಂದ ಮಗಳು ಚಿತ್ರರಂಗದಲ್ಲಿ ಇದ್ದಾಳೆ.ಯಾವತ್ತೂ ಕೆಟ್ಟ ಹೆಸರು ಬಂದಿಲ್ಲ. ನಮ್ಮ ಆಸ್ತಿಪಾಸ್ತಿ ವಿಚಾರವಾಗಿ  ಇಡಿಗೆ ಮಾಹಿತಿ ಕೊಟ್ಟಿದ್ದೇವೆ. ನಮ್ಮಲ್ಲಿರುವುದು ಒಂದೇ ಪ್ಲ್ಯಾಟ್. ಮಾಧ್ಯಮಗಳಲ್ಲಿ ಮಗಳನ್ನು ಡ್ರಗ್ ರಾಣಿ ಎಂದು ಕರೆಯುತ್ತಿರುವುದು ನೋವು ತಂದಿದೆ ಎಂದಿದ್ದಾರೆ.

(ಗಲ್ಫ್ ಕನ್ನಡಿಗ)