ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿ ಇರಲ್ಲ ಅಂದ್ರು ಕಾಂಗ್ರೆಸ್ ನಾಯಕ ಕೆ ಎನ್ ರಾಜಣ್ಣ
Wednesday, September 16, 2020
(ಗಲ್ಫ್ ಕನ್ನಡಿಗ)ತುಮಕೂರು; ಯಡಿಯೂರಪ್ಪ ಅವರು ಇಲ್ಲ ಅಂದ್ರೆ ರಾಜ್ಯದಲ್ಲಿ ಬಿಜೆಪಿ ಇರಲ್ಲ ಎಂದು ಕಾಂಗ್ರೆಸ್ ಮುಖಂಡ ಎನ್ ರಾಜಣ್ಣ ಹೇಳಿದ್ದಾರೆ.
(ಗಲ್ಫ್ ಕನ್ನಡಿಗ)ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಎಸ್ ವೈ ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಹೊರಟುಹೋಗುತ್ತದೆ. ಯಡಿಯೂರಪ್ಪ ಅವರ ಒಂದು ವರ್ಷಕ್ಕೆ ಸಿಎಂ ಮಾಡಿರುವುದು ಎಂದು ಆ ಪಕ್ಷದ ಮುಖಂಡರು ಹೇಳ್ತಾರೆ. ಆದರೆ ಬಿಎಸ್ ವೈ ಅವರನ್ನು ಬದಲಾವಣೆ ಮಾಡಿದರೆ ಆ ಪಕ್ಷವೇ ಹೊರಟುಹೋಗುತ್ತದೆ ಎಂದರು.
(ಗಲ್ಫ್ ಕನ್ನಡಿಗ)ಬಿಜೆಪಿಗೆ ಯಡಿಯೂರಪ್ಪ, ಕಾಂಗ್ರೆಸ್ ಗೆ ಸಿದ್ದ ರಾಮಯ್ಯ, ಜೆಡಿಎಸ್ ಗೆ ದೇವೆಗೌಡರು ಇಲ್ಲಾಂದ್ರೆ ಆ ಪಕ್ಷಗಳೆ ಇರುವುದಿಲ್ಲ. ಈ ಮೂವರಿಗೆ ಮಾತ್ರ ಮತಗಳನ್ನು ಟ್ರಾನ್ಸ್ ಫರ್ ಮಾಡಿಸುವ ಶಕ್ತಿ ಇದೆ ಎಂದರು.
(ಗಲ್ಫ್ ಕನ್ನಡಿಗ)