ನಿನ್ನೆ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ ಗೃಹಸಚಿವ ಬೊಮ್ಮಾಯಿಗೂ ಕೊರೊನಾ; ಸಿಎಂ ಸೇರಿದಂತೆ ಸಚಿವರನೇಕರಿಗೆ ಆತಂಕ!


(ಗಲ್ಫ್ ಕನ್ನಡಿಗ)ಬೆಂಗಳೂರು;  ನಿನ್ನೆ ವಿಧಾನಸೌಧದಲ್ಲಿ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೂ  ಕೊರೊನಾ ದೃಢಪಟ್ಟಿದೆ. 

(ಗಲ್ಫ್ ಕನ್ನಡಿಗ)ಈಗಾಗಲೇ ಕೊರೊನಾದಿಂದ ಗುಣಮುಖರಾಗಿರುವ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರಿಗೆ, ವಿಧಾನಸಭೆಯ ಸಿಬ್ಬಂದಿ ವರ್ಗಕ್ಕೆ ಆತಂಕ ಎದುರಾಗಿದೆ.(ಗಲ್ಫ್ ಕನ್ನಡಿಗ)ಕೊರೊನಾ ದೃಢಪಟ್ಟಿರುವ ಬಗ್ಗೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಟ್ವೀಟ್ ಮೂಲಕ ದೃಢೀಕರಿಸಿದ್ದಾರೆ. ನಮ್ಮ ಮನೆಯಲ್ಲಿ ಕೆಲಸ ನಿರ್ವಹಿಸುವ ಹುಡುಗನಿಗೆ ನಿನ್ನೆ ಕೊರೊನಾ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನಾನು ಸಹ ಕೊರೊನಾ ಟೆಸ್ಟ್ ಮಾಡಿದ್ದು ಪಾಸಿಟಿವ್ ಬಂದಿದೆ. ಯಾವುದೇ ರೀತಿಯ ರೋಗಲಕ್ಷಣಗಳು ಇಲ್ಲ. ಆರೋಗ್ಯವಾಗಿದ್ದು, ಮನೆಯಲ್ಲಿ ಪ್ರತ್ಯೇಕವಾಗಿದ್ದೇನೆ ಎಂದು ತಿಳಿಸಿದ್ದಾರೆ.


(ಗಲ್ಫ್ ಕನ್ನಡಿಗ)