
ಶ್ರೀರಾಮ ಮಂದಿರದ ದೇಣಿಗೆಗೂ ಕೊರೊನಾ ಅಡ್ಡಿ!
Sunday, September 27, 2020
(ಗಲ್ಪ್ ಕನ್ನಡಿಗ)ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡಲು ಸಿದ್ದತೆಗಳು ನಡೆಯುತ್ತಿದ್ದರೂ ಮಂದಿರ ನಿರ್ಮಾಣಕ್ಕೆ ಬೇಕಾದ ದೇಣಿಗೆ ಸಂಗ್ರಹಿಸಲು ಕೊರೊನಾ ಅಡ್ಡಿಯಾಗಿದೆ.
(ಗಲ್ಪ್ ಕನ್ನಡಿಗ)ಹೀಗೆಂದು ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ನಿರ್ದೇಶಕರಲ್ಲೊಬ್ಬರಾದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿರುವ ಅವರು ಕೊರೊನಾದಿಂದ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ದೇಣಿಗೆ ಹರಿದುಬರುತ್ತಿಲ್ಲ.ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಕಾಮಗಾರಿ ಮಂದಗತಿಯಲ್ಲಿದೆ. ಕೊರೊನಾ ತಗ್ಗಿದ ಮೇಲೆ ಅಯೋಧ್ಯೆಗೆ ಭೇಟಿ ನೀಡಲಾಗುವುದು. ದೇಣಿಗೆ ಸಂಗ್ರಹಿಸಲು ವಿಶೇಷ ಆಂದೋಲನ ನಡೆಸಲು ನಿರ್ಧರಿಸಲಾಗಿತ್ತಾದರೂ ಕೊರೊನಾದಿಂದ ಅಡ್ಡಿಯಾಗಿದೆ. ಆದರೂ ಎಲ್ಲರ ಸಹಕಾರವಿರುವುದರಿಂದ ನಿಗದಿತ ಸಮಯದಲ್ಲೆ ಶ್ರೀ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಇದನ್ನು ಓದಿ; ಶ್ರೀರಾಮ ಮಂದಿರ ಪ್ರಕರಣ ಮುಗಿದ ಬಳಿಕ ಆರಂಭವಾಗಿದೆ ಶ್ರೀಕೃಷ್ಣ ಜನ್ಮಭೂಮಿ ವಿವಾದ- ಈದ್ಗಾ ಮಸೀದಿ ತೆರವಿಗೆ ಬೇಡಿಕೆ!
(ಗಲ್ಪ್ ಕನ್ನಡಿಗ)