ಶ್ರೀರಾಮ ಮಂದಿರ ಪ್ರಕರಣ ಮುಗಿದ ಬಳಿಕ ಆರಂಭವಾಗಿದೆ ಶ್ರೀಕೃಷ್ಣ ಜನ್ಮಭೂಮಿ ವಿವಾದ- ಈದ್ಗಾ ಮಸೀದಿ ತೆರವಿಗೆ ಬೇಡಿಕೆ!
(ಗಲ್ಫ್ ಕನ್ನಡಿಗ)ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡಬೇಕೆಂಬ ಚಳವಳಿ ದೇಶದಲ್ಲಿ ರಾಜಕೀಯ ಸ್ಥಿತ್ಯಂತರ ಮಾಡಲು ಸಫಲವಾಯಿತು. ಬಿಜೆಪಿ ಗೆ ರಾಜಕೀಯ ಶಕ್ತಿ ನೀಡಿದ ಶ್ರೀರಾಮಮಂದಿರ ವಿವಾದ ಮುಕ್ತಾಯ ಕಂಡಿದೆ. ಆದರೆ ಇದೀಗ ಶ್ರೀ ಕೃಷ್ಣ ಜನ್ಮ ಭೂಮಿ ವಿವಾದ ತಲೆದೋರುವ ಸಾಧ್ಯತೆ ಕಂಡುಬರುತ್ತಿದೆ.

(ಗಲ್ಫ್ ಕನ್ನಡಿಗ)ಶ್ರೀಕೃಷ್ಣ ಹುಟ್ಟಿದ ಮಥುರಾ ಸ್ಥಳವನ್ನು ಸಂಪೂರ್ಣವಾಗಿ ವಾಪಾಸು ನೀಡಬೇಕು ಎಂದು ಮಥುರಾ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಲಾಗಿದೆ.

(ಗಲ್ಫ್ ಕನ್ನಡಿಗ)ಮಥುರಾ ನ್ಯಾಯಾಲಯದಲ್ಲಿ ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಪರವಾಗಿ ವಕೀಲರಾದ ಹರಿಶಂಕರ್ ಮತ್ತು ವಿಷ್ಣು ಜೈನ್ ಅವರು ಈ ಸಿವಿಲ್ ದಾವೆ ಹೂಡಿದ್ದಾರೆ. ಶ್ರೀ ಕೃಷ್ಣ ಜನಿಸಿದ ಪ್ರದೇಶದ ಪ್ರತಿ ಇಂಚು ಭೂಮಿಯು ಶ್ರೀಕೃಷ್ಣನ  ಭಕ್ತರಿಗೆ ಮತ್ತು ಹಿಂದೂ ಸಮುದಾಯದ ಪಾಲಿಗೆ ಪವಿತ್ರ ಸ್ಥಳವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

(ಗಲ್ಫ್ ಕನ್ನಡಿಗ)ಶ್ರೀಕೃಷ್ಣ ಜನ್ಮ ಭೂಮಿಯ 13.37 ಎಕರೆ ಪ್ರದೇಶದ ಮೇಲೆ ಹಕ್ಕನ್ನು ವಾಪಸು ಪಡೆಯುವ ಸಂಬಂಧ ಈ ದಾವೆ ಹೂಡಲಾಗಿದೆ. ಇಲ್ಲಿರುವ ಪುರಾತನ ದೇವಾಲಯದ ಪಾರ್ಶ್ವದಲ್ಲಿ ಕಟ್ಟಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕೆಂಬ ಬೇಡಿಕೆಯನ್ನು ಅರ್ಜಿಯಲ್ಲಿ ಸಲ್ಲಿಸಲಾಗಿದೆ. 

(ಗಲ್ಫ್ ಕನ್ನಡಿಗ)ಈ ಸಂಬಂಧ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ವಿನಯ ಕಟಿಯಾರ್ ಅವರು ಮಥುರಾದಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಈದ್ಗಾ ಮಸೀದಿ ತೆಗೆಯಲು , ಕೃಷ್ಣ ಜನ್ಮ ಭೂಮಿಯನ್ನು ಮರುಪಡೆಯಲು ಅಗತ್ಯವಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.


(ಗಲ್ಫ್ ಕನ್ನಡಿಗ)
#mathura #srikrishnaJanmabhumi