ಇದೊಂದು ವಿಚಿತ್ರ ಕೇಸ್; ವಶಕ್ಕೆ ಪಡೆದ ಗಾಂಜಾವನ್ನು ಪೆಡ್ಲರ್ ಗೆ ಮಾರಿದ ಪೊಲೀಸರು!
Sunday, September 27, 2020
(ಗಲ್ಫ್ ಕನ್ನಡಿಗ)ದೇಶಾದ್ಯಂತ ಮಾದಕ ದ್ರವ್ಯಗಳ ಸುದ್ದಿಯಾಗುತ್ತಿದೆ. ಗಾಂಜಾ , ಡ್ರಗ್ಸ್ ವಿರುದ್ದ ಪೊಲೀಸರು ಸಮರ ಸಾರುತ್ತಿರುವ ಸುದ್ದಿಗಳು ಬಂದಿದ್ದರೆ ನವದೆಹಲಿಯಲ್ಲೊಂದು ವಿಚಿತ್ರ ಕೇಸ್ ವರದಿಯಾಗಿದೆ.
(ಗಲ್ಫ್ ಕನ್ನಡಿಗ)ನವದೆಹಲಿಯ ಪೊಲೀಸರು ಡ್ರಗ್ಸ್ ಪೆಡ್ಲರ್ ವಿರುದ್ದ ಕಾರ್ಯಾಚರಣೆ ನಡೆಸಿ 160 ಕೆ ಜಿ ವಶಪಡಿಸಿಕೊಂಡಿದ್ದರು. ಆದರೆ ದಾಖಲೆಯಲ್ಲಿ ತೋರಿಸಿದ್ದು 1 ಕೆ ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು. ಉಳಿದ 159 ಕೆ ಜಿ ಗಾಂಜಾವನ್ನು ಬಂಧಿಸಿದ ಆರೋಪಿಗೆ ಮಾರಾಟ ಮಾಡಿ ಹಣ ಪಡೆದುಕೊಂಡಿದ್ದಾರೆ.
(ಗಲ್ಫ್ ಕನ್ನಡಿಗ)ಒರಿಸ್ಸಾದಿಂದ ಅನಿಲ್ ಎಂಬ ಡ್ರಗ್ ಪೆಡ್ಲರ್ ಗಾಂಜಾವನ್ನು ನವದೆಹಲಿಗೆ ತಂದಿದ್ದ. ಈತನನ್ನು ಸೆರೆಹಿಡಿದು ಆತನಲ್ಲಿದ್ದ 160 ಕೆ ಜಿ ಗಾಂಜಾದಲ್ಲಿ 1 ಕೆ ಜಿ ವಶಕ್ಕೆ ಪಡೆದು ಉಳಿದ 159 ಕೆ ಜಿ ಗಾಂಜಾವನ್ನು ಅವನಿಗೆ ಮಾರಿದ್ದಾರೆ.
(ಗಲ್ಫ್ ಕನ್ನಡಿಗ)ಈ ಬಗ್ಗೆ ಅನುಮಾನ ಬಂದ ಕಾರಣ ಇಲಾಖೆಯ ಮೇಲಾಧಿಕಾರಿಗಳು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂದ ದಿಲ್ಲಿ ಪೊಲೀಸ್ ಇಲಾಖೆಯ ಇಬ್ಬರು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
(ಗಲ್ಫ್ ಕನ್ನಡಿಗ)