ಡ್ರಗ್ಸ್ ವಿರುದ್ದ ಬಂಟ್ವಾಳದಲ್ಲಿ ABVP ವತಿಯಿಂದ ಪತ್ರ ಚಳುವಳಿ ಅಭಿಯಾನ
Saturday, September 26, 2020
(ಗಲ್ಫ್ ಕನ್ನಡಿಗ)ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾ ವಿರುದ್ದ ಸೂಕ್ತ ಕಾನೂನನ್ನು ರೂಪಿಸಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ಇಂದು ಪತ್ರ ಚಳವಳಿ ನಡೆಯಿತು.
(ಗಲ್ಫ್ ಕನ್ನಡಿಗ)ಎಬಿವಿಪಿ ಬಂಟ್ವಾಳ ಶಾಖೆ ವತಿಯಿಂದ ಬಿಸಿರೋಡು ಹಾಗೂ ಸಿದ್ದಕಟ್ಟೆ ಅಂಚೆ ಕಛೇರಿ ಬಳಿ ಪತ್ರ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು.ಮಾದಕ ವಸ್ತುಗಳ ಬಳಕೆ ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿದೆ.ಈ ಜಾಲಕ್ಕೆ ಪ್ರಮುಖವಾಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವ ಸಮುದಾಯವೇ ಬಲಿಯಾಗುತ್ತಿರುವುದು ಅಪಾಯಕಾರಿ ಸಂಗತಿ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬಹು ಪ್ರಭಾವಿಗಳು ಭಾಗಿಯಾಗಿರುವ ಈ ಜಾಲವನ್ನು ಮಟ್ಟ ಹಾಕುವ ಸವಾಲು ರಾಜ್ಯ ಸರ್ಕಾರದ ಮುಂದಿದೆ.ಅದಕ್ಕಾಗಿ ಪ್ರಬಲ ಕಾನೂನನ್ನು ರೂಪಿಸುವುದು ಮಾತ್ರ ಪರಿಹಾರ .ಸರ್ಕಾರ ನಿಷ್ಪಕ್ಷಪಾತ ತನಿಖೆ ಹಾಗೂ ಕಾನೂನನ್ನು ರೂಪಿಸಿ ಈ ದಂಧೆಯ ವಿರುದ್ದ ಸಮರ ಸಾರಬೇಕೆಂದು ABVP ಯು ಪತ್ರ ಚಳುವಳಿಯ ಮೂಲಕ ಆಗ್ರಹಿಸಿ ಪತ್ರವನ್ನು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಿಕೊಡಲಾಯಿತು.
(ಗಲ್ಫ್ ಕನ್ನಡಿಗ)ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ಹರ್ಷಿತ್ ಕೊಯಿಲ, ಸಹ ಸಂಚಾಲಕರಾದ ದಿನೇಶ್ ಕೊಯಿಲ,ನಗರ ಕಾರ್ಯದರ್ಶಿ ಅಖಿಲಾಷ್,ಕಾಲೇಜು ಘಟಕದ ಅದ್ಯಕ್ಷರಾದ ಗುರುಪ್ರಸಾದ್ ಸಿದ್ದಕಟ್ಟೆ,ನಗರ ಸಹ ಕಾರ್ಯದರ್ಶಿಗಳಾದ ನಾಗರಾಜ್ ಶೆಣೈ ,ಗಗನ್ ,ಪ್ರಶಾಂತ್ ಅಜ್ಜಿಬೆಟ್ಟು ಮುಂತಾದವರು ಉಪಸ್ಥಿತರಿದ್ದರು.
(ಗಲ್ಫ್ ಕನ್ನಡಿಗ)