ಸೋಶಿಯಲ್ ವಾಯ್ಸ್ ಕುಂಜತ್ತಬೈಲ್ ನೇತೃತ್ವದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ


(ಗಲ್ಫ್ ಕನ್ನಡಿಗ)ಮಂಗಳೂರು: ಸೋಶಿಯಲ್ ವಾಯ್ಸ್ ಕುಂಜತ್ತಬೈಲ್, ಮಂಗಳೂರು ಇದರ ವತಿಯಿಂದ  ಉಚಿತ ಅಯುಷ್ಮಾನ್  ಕಾರ್ಡ್ ವಿತರಣಾ ಅಭಿಯಾನ  ಕಾರ್ಯಕ್ರಮವು ಸಿದ್ದೀಖ್ ಜುಮಾ ಮಸ್ಜಿದ್ ಮರಕಡ ಕುಂಜತ್ತಬೈಲ್ ಇದರ ವಠಾರದಲ್ಲಿ  ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಿದ್ದೀಖ್ ಜುಮಾ ಮಸೀದಿಯ ಖತೀಬರಾದ ಎನ್. ವಿ ಇಸ್ಹಾಕ್ ಸಖಾಫಿ ದುವಾಶೀರ್ವಚನ ದೊಂದಿಗೆ ನೆರವೇರಿಸಿದರು. 


(ಗಲ್ಫ್ ಕನ್ನಡಿಗ)ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಮ.ನ.ಪಾ ಸ್ಥಾಯೀ ಸಮಿತಿಯ ಅಧ್ಯಕ್ಷರಾದ  ಶರತ್ ಕುಮಾರ್, ಮ.ನ.ಪಾ ಸದಸ್ಯರು   ಅನಿಲ್ ಕುಮಾರ್,  ಮಾಜಿ ಮ.ನ.ಪಾ ಉಪ ಮಹಾಪೌರರಾದ ಕೆ ಮಹಮ್ಮದ್, ಸಂಘಟನೆಯ ಸಾಮಾಜಿಕ ಚಟುವಟಿಕೆಗಳನ್ನು ಶ್ಲಾಪಿಸಿದರು, ಸಿದ್ದೀಖ್ ಜುಮಾ ಮಸ್ಜಿದ್  ಅಧ್ಯಕ್ಷರಾದ ಅಬ್ದುಲ್ ಖಾದರ್, ಕಾರ್ಯದರ್ಶಿ ಹುಸೈನ್ ರಿಯಾಜ್,  ಸೋಶಿಯಲ್ ವಾಯ್ಸ್ ಅಧ್ಯಕ್ಷರಾದ  ಆನ್ವರ್ ಕುಂಜತ್ತಬೈಲ್, ಕಾರ್ಯದರ್ಶಿ ಬಶೀರ್ ಮತ್ತು ತಂಡದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಸೋಷಿಯಲ್ ವಾಯ್ಸ್ ಇದರ ಸಂಯೋಜಕರಾದ ರೆಹಮಾನ್ ಖಾನ್ ಕುಂಜತ್ತಬೈಲ್ ಸ್ವಾಗತಿಸುವುದರೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಎ.ಕೆ ಝಬೇರ್ ಕುಡ್ಲ ವಂದಿಸಿದರು.
ಸುಮಾರು 500 ಮಂದಿ  ಫಲಾನುಭವಿಗಳಿಗೆ  ಕಾರ್ಡ್ ವಿತರಿಸಲಾಯಿತು..
(ಗಲ್ಫ್ ಕನ್ನಡಿಗ)