
ಡ್ರಗ್ ಕೇಸಲ್ಲಿ ಬಂಧಿತನಾದ ಖ್ಯಾತ ಬಾಲಿವುಡ್ ನಟನ ಬಂಗಲೆ ಹೇಗಿದೆ ಗೊತ್ತಾ? ಇದನ್ನು ನೋಡಿ ನಿಮಗೂ ಶಾಕ್ ಆಗುತ್ತೆ!
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಬರೆದಂತೆ....
ಇದು ಡ್ರಗ್ಸ್ ಕೇಸಿನಲ್ಲಿ ಬಂಧಿತನಾಗಿರುವ "ಖ್ಯಾತಬಾಲಿವುಡ್ ನಟ ", ಡ್ಯಾನ್ಸರ್ ಕಿಶೋರ್ ಅಮಾನ್ ಶೆಟ್ಟಿಯ ಮನೆ. ಕೆಲವು ಟಿವಿ ಮಾಧ್ಯಮಗಳ ಪ್ರಕಾರ ಈ ಬಂಗಲೆಯಲ್ಲಿಯೇ ಕಿಶೋರ್ ಸೆಲೆಬ್ರಿಟಿಗಳನ್ನು, ಸಿರಿವಂತರನ್ನು ಸೇರಿಸಿ ಪಾರ್ಟಿ ಆಯೋಜಿಸುತ್ತಿದ್ದ. ಈತನದ್ದು ದುಬಾರಿ ಬದುಕು.
ಈ ಬೃಹತ್ ಬಂಗಲೆಗೆ ಪಾರ್ಟಿಗೆ ಬರುವ ಸಿಲೆಬ್ರೆಟಿಗಳಾದರು ಯಾರಿರಬಹುದು ! ಮಾಧ್ಯಮಗಳು ಇಷ್ಟೊಂದು ಮಾನ ಕಳೆದುಕೊಳ್ಳಬಾರದು.
ಕಿಶೋರ್ ನ ಡ್ರಗ್ಸ್ ಲಿಂಕ್ ಪೂರ್ಣಪ್ರಮಾಣದ ತನಿಖೆಯಾಗಲಿ. ತಪ್ಪಿದ್ದರೆ ಅದಕ್ಕೆ ಸರಿಯಾದ ಶಿಕ್ಷೆಯಾಗಲಿ. ಆತನಿಗೆ/ಆತನಂತವರಿಗೆ ಡ್ರಗ್ಸ್ ಪೂರೈಕೆ ಮಾಡುವ ಜಾಲ ಕಾನೂನಿನ ಕುಣಿಕೆಗೆ ಸಿಲುಕಿಕೊಳ್ಳಲಿ. ತನಿಖೆ ಆ ನಿಟ್ಟಿನಲ್ಲಿ ಸಾಗಲಿ. ಅದು ಬಿಟ್ಟು ಸ್ಥಳಕ್ಕೆ ಬರದೆ ಕಳಪೆ ದರ್ಜೆಯ ಕತೆ ಹಣೆದು ಜನರ ದಾರಿ ತಪ್ಪಿಸುವುದು, ಯಾರದೋ ಬದುಕಿಗೆ ಚಪ್ಪಡಿ ಕಲ್ಲು ಎಳೆಯುವುದು ನಾಗರಿಕ ನಡೆ ಅಲ್ಲ.