ಅಳಪೆ ಉತ್ತರ ವಾರ್ಡ್‌ನಲ್ಲಿ ಮನೆಗೆ ಹಾನಿ: ಮೇಯರ್ ದಿವಾಕರ್ ಭೇಟಿ, ಅಗತ್ಯ ನೆರವಿಗೆ ಸೂಚನೆಮಂಗಳೂರು: ಸತತ ಧಾರಾಕಾರ ಮಳೆಗೆ ಮಂಗಳೂರಿನಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ 51ನೇ ಅಳಪೆ ಉತ್ತರ ವಾರ್ಡಿನ ಸರಿಪಲ್ಲ - ಕನ್ನಗುಡ್ಡೆ ಪ್ರದೇಶದಲ್ಲಿ ದಾಮೋದರ್ ಎಂಬುವರ ವಾಸ್ತವ್ಯದ ಮನೆ ಭಾರೀ ಮಳೆಗೆ ಸಂಪೂರ್ಣ ಹಾನಿಯಾಗಿದೆ.

ಮನೆಯ ಹಿಂದಿನ ಗುಡ್ಡೆ ಕುಸಿದ್ದು ಮನೆ ಹಾನಿಯಾಗಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಮೇಯರ್ ದಿವಾಕರ್ ಪಾಂಡೇಶ್ವರ್ ಭೇಟಿ ನೀಡಿದರು. ಸ್ಥಳವನ್ನು ಪರಿಶೀಲಿಸಿದ ಅವರು ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿರು. ಅಲ್ಲದೆ, ಸಂತ್ರಸ್ತ ಕುಟುಂಬ ವರ್ಗಕ್ಕೆ ಅಗತ್ಯ ನೆರವು ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ, ಸತತವಾಗಿ ಸುರಿಯುತ್ತಿರುವ ಬಾರೀ ಮಳೆಗೆ ನೀರುಮಾರ್ಗದಿಂದ ಕಟಿಂಜಕ್ಕೆ ತೆರಳುವ ಕಾಂಕ್ರೀಟ್ ರಸ್ತೆ ಕುಸಿದಿದ್ದು ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಗ್ರಾಮ ಪಂಚಾಯತ್ ಅಧಿಕಾರಿ ವರ್ಗದೊಂದಿಗೆ ಮಾತುಕತೆ ನಡೆಸಿದರು.

ಕೂಡಲೇ ಪರ್ಯಾಯ ವ್ಯವಸ್ಥೆ ಮತ್ತು ಹಾನಿಗೊಂಡ ರಸ್ತೆಯನ್ನು ಪುನರ್ನಿರ್ಮಾಣ ಮಾಡುವ ಬಗ್ಗೆ ಅಧಿಕಾರಿಗಳ ಸಭೆ ಕರೆಯುವುದಾಗಿ ಅವರು ಹೇಳಿದರು.