ಮಂಗಳೂರು ನೆರೆ: ಮಂತ್ರ ಸರ್ಫ್ ಕ್ಲಬ್‌ನಿಂದ 40 ಮಂದಿಯ ರಕ್ಷಣೆ
Monday, September 21, 2020
ಮಂಗಳೂರು: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿಯಲ್ಲಿ ನೆರೆ ಸೃಷ್ಟಿಯಾಗಿದೆ. ಹಲವೆಡೆ ಮನೆ - ಕಟ್ಟಡಗಳು ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಕರಾವಳಿಯ ಎಲ್ಲ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ನದಿ ತಟದಲ್ಲಿ ಇದ್ದವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಈ ಮಧ್ಯೆ, ಕಟೀಲು, ಮೂಲ್ಕಿ, ಕಿಲ್ಪಾಡಿ, ಬಳ್ಕುಂಜೆ ಮೊದಲಾದ ಕಡೆಗಳಲ್ಲಿ ಮಂತ್ರ ಸರ್ಫ್ ಕ್ಲಬ್‌ನಿಂದ ರಕ್ಷಣಾ ಕಾರ್ಯ ನಡೆಯಿತು. ಸುಮಾರು 40ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.