SHOCKING; ಪ್ರಿಯಕರನ ಜೊತೆಗೆ ಓಡಿಹೋದ ಅಕ್ಕ, ಸುದ್ದಿ ಕೇಳಿ ತಂಗಿ ಸಾವು;ಉಡುಪಿಯಲ್ಲಿ ನಡೆಯಿತು ದಾರುಣ ಘಟನೆ
Friday, September 4, 2020
(ಗಲ್ಫ್ ಕನ್ನಡಿಗ)ಮಂಗಳೂರು; ಪ್ರೀತಿಯ ಅಕ್ಕ ಪ್ರಿಯಕರನೊಂದಿಗೆ ಓಡಿ ಹೋದ ಸುದ್ದಿ ಕೇಳಿ ತಂಗಿ ಸಾವನ್ನಪ್ಪಿದ ದಾರುಣ ಘಟನೆ ಉಡುಪಿಯಲ್ಲಿ ನಡೆದಿದೆ.
(ಗಲ್ಫ್ ಕನ್ನಡಿಗ)ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಂಜಲ್ತಾರ್ ಎಂಬಲ್ಲಿ ಈ ಘಟನೆ ನಡೆದಿದೆ. ಮಾಳ ನಿವಾಸಿಯಾಗಿರುವ ಸುರಕ್ಷಿತ ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು ಎರಡು ದಿನಗಳಿಂದ ಕಾಣೆಯಾಗಿರುವ ಅವಳನ್ನು ಮನೆಯವರು ಹುಡುಕುತ್ತಿದ್ದರು.ಈಕೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿತ್ತು.
(ಗಲ್ಫ್ ಕನ್ನಡಿಗ)ಆಕೆಯ ತಂಗಿ ಶ್ವೇತಾಳಿಗೆ ನಿನ್ನೆ ಪೋನ್ ಮಾಡಿ ನನಗೆ ಮನೆಯವರು ನಿಶ್ಚಯ ಮಾಡಿದ ಹುಡುಗನೊಂದಿಗೆ ಮದುವೆಯಾಗಲು ಇಷ್ಟವಿಲ್ಲ. ನಾನು ಸಹೋದ್ಯೋಗಿ ಭುವನ್ ನನ್ನು ಪ್ರೀತಿಸುತ್ತಿದ್ದು ಆತನ ಜೊತೆಗೆ ಹೋಗಿದ್ದೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದಿದ್ದಾಳೆ.
(ಗಲ್ಫ್ ಕನ್ನಡಿಗ)ಅಕ್ಕನ ಮಾತು ಕೇಳಿ ಶ್ವೇತಾ ಳಿಗೆ ಅಘಾತವಾಗಿದೆ. ಅಘಾತವಾದ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಆಕೆ ಫೀಡ್ಸ್ ಕಾಯಿಲೆಯಿಂದಲೂ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.
(ಗಲ್ಫ್ ಕನ್ನಡಿಗ)