ತುಪ್ಪದ ಹುಡುಗಿಗೆ ಬೆಳ್ಳಂಬೆಳಗೆ ಶಾಕ್ ನೀಡಿದ ಸಿಸಿಬಿ ಅಧಿಕಾರಿಗಳು; ರಾಗಿಣಿಯ 4 ಮೊಬೈಲ್ ವಶಕ್ಕೆ ಪಡೆದ ಅಧಿಕಾರಿಗಳು


(ಗಲ್ಫ್ ಕನ್ನಡಿಗ)ಬೆಂಗಳೂರು; ಸ್ಯಾಂಡಲ್ ವುಡ್ ನಲ್ಲಿ  ಸಂಚಲನ ಸೃಷ್ಟಿಸಿರುವ  ಮಾದಕ ದ್ರವ್ಯ ಪ್ರಕರಣದಲ್ಲಿ ತುಪ್ಪದ ಹುಡುಗಿ ರಾಗಿಣಿಯ 4 ಮೊಬೈಲ್ ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

(ಗಲ್ಫ್ ಕನ್ನಡಿಗ)ಡ್ರಗ್ಸ್ ಮಾಫಿಯ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ನ್ಯಾಯಾಲಯದಿಂದ ವಾರಂಟ್ ಪಡೆದು ಬೆಳಿಗ್ಗೆ 6.30 ಕ್ಕೆ ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ. ಎರಡು ಕಾರುಗಳಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆಗೆ ಬಂದಿದ್ದರು.

(ಗಲ್ಫ್ ಕನ್ನಡಿಗ)ಯಲಹಂಕದಲ್ಲಿರುವ ಜ್ಯೂಡಿಶಿಯಲ್ ಲೇ ಔಟ್ ಬಡವಾಣೆಯಲ್ಲಿರುವ ಪ್ಲ್ಯಾಟ್ ನಲ್ಲಿ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದು ಈ ವೇಳೆ ರಾಗಿಣಿಯ ನಾಲ್ಕು ‌ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ‌. 2 ಮೊಬೈಲ್ ನಲ್ಲಿ ಇರುವ ಬಹುತೇಕ ಮಾಹಿತಿ ಡಿಲಿಟ್  ಮಾಡಲಾಗಿದೆ ಎಂದು ತಿಳಿದುಬಂದಿದೆ.

(ಗಲ್ಫ್ ಕನ್ನಡಿಗ)