ರಾಗಿಣಿಗೂ ನನಗೂ ಸಂಬಂಧ ಇದೆ ಎಂದ ರವಿಶಂಕರ್!- ನಟಿಗಾಗಿ ಪ್ರತಿದಿನ ಲಕ್ಷ ರೂ. ಖರ್ಚು!ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಈತನ ವಿಚಾರಣೆ ವೇಳೆ ಅಧಿಕಾರಿಗಳಿಗೆ ಈತ ಹಲವು ಮಹತ್ವದ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾನೆ. ನಾನು ರಾಗಿಣಿ ಜೊತೆ ಲಿವ್ ಇನ್ ರಿ ಲೇ ಷನ್‌ಶಿಪ್‌ನಲ್ಲಿದ್ದೆ. ದಿನಕ್ಕೆ 1 ಲಕ್ಷ ರೂಪಾಯಿಯಷ್ಟು ಖರ್ಚು ಮಾಡ್ತಿದ್ದೆ ಎಂಬ ಮಾಹಿತಿ ನೀಡಿದ್ದಾನೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಾರಿಗೆ ಪ್ರಾಧಿಕಾರದ ಅಧಿಕಾರಿಯಾಗಿರುವ ರವಿಶಂಕರ್ ತನಗೆ ಬರುವ 30-35 ಸಾವಿರ ಸಂಬಳದಲ್ಲಿ ಹೇಗೆ ನಿಭಾಯಿಸುತ್ತಿದ್ದ ಎಂಬ ಅಧಿಕಾರಿಗಳಿಗೆ ಕಾಡುತ್ತಿದ್ದ ಪ್ರಶ್ನೆಗಳಿಗೆ ಮತ್ತಷ್ಟು ಉತ್ತರ ಸಿಗಲು ರವಿಶಂಕರ್‌ನ ಕಸ್ಟಡಿಗೆ ಪಡೆದಿದ್ದಾರೆ.


ಡ್ರಗ್ ಮಾಫಿಯಾ ಜಾಲದ ಬೆನ್ನತ್ತಿರುವ ಸಿಸಿಬಿ ಪೊಲೀಸರು ಈಗಾಗಲೇ ನಟಿ ಸಂಜನಾಳ ಆಪ್ತರೆನಿಸಿದ ಡ್ರಗ್ ಡೀಲರ್, ಪೆಡ್ಲರ್‌ಗಳಾದ ರಾಹುಲ್ ಮತ್ತು ಕಾರ್ತಿಕ್‌ ರಾಜ್‌ ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಪೈಕಿ ಕಾರ್ತಿಕ್‌ ರಾಜ್‌ ಬಿಜೆಪಿ ಪಕ್ಷದ ಕಾರ್ಯಕರ್ತ ಎನ್ನಲಾಗುತ್ತಿದೆ. ಅಲ್ಲದೆ, ಇವರು ನೀಡಿದ ಮಾಹಿತಿಯ ಆಧಾರದಲ್ಲಿ ರವಿಶಂಕರ್‌ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ ರವಿಶಂಕರ್‌ ಸ್ಫೋಟಕ ಮಾಹಿತಿ ನೀಡಿದ್ದು, ಚಿತ್ರರಂಗದಲ್ಲಿ ಮತ್ತಷ್ಟು ತಲ್ಲಣ ಉಂಟುಮಾಡುವಂತಿದೆ.

ಬಂಧಿತ ಆರೋಪಿ ರವಿಶಂಕರ್‌ ಮೂಲತಃ ಆರ್‌ಟಿಓ ಅಧಿಕಾರಿ. ಈತನ ತಂದೆ ಕೆಲಸದಲ್ಲಿರುವಾಗಲೇ ಮೃತಪಟ್ಟ ಕಾರಣ ಅನುಕಂಪದ ನೆಲೆಯಲ್ಲಿ ಈತನಿಗೆ ಆ ಕೆಲಸ ಸಿಕ್ಕಿತ್ತು. ಈತನ ತಿಂಗಳ ಸಂಬಳ 30 ರಿಂದ 35 ಸಾವಿರ ರೂಪಾಯಿ.

ಆದರೆ, ಈತ ಪೊಲೀಸ್‌ ವಿಚಾರಣೆಯ ವೇಳೆ, ತಾನು ರಾಗಿಣಿ ಜೊತೆ ಲಿವ್ ಇನ್‌ ಸಂಬಂಧದಲ್ಲಿದ್ದೇನೆ. ರಾಗಿಣಿಗಾಗಿ ತಾನು ಒಂದು ದಿನಕ್ಕೆ 1 ಲಕ್ಷ ಖರ್ಚು ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಈತ ನೀಡಿದ ಮಾಹಿತಿಗೆ ಪೊಲೀಸರೂ ಬೆಚ್ಚಿ ಬಿದ್ದಿದ್ದಾರೆ. ರವಿಶಂಕರ್ ಗೆ ಬರುವ ಸಂಬಳದಲ್ಲಿ ಇಷ್ಟು ಖರ್ಚನ್ನು ಹೇಗೆ ನಿಭಾಯಿಸುತ್ತಿದ್ದ? ಇದೆಲ್ಲಾ ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಯೇ ಪೊಲೀಸರಿಗೆ ದೊಡ್ಡದಾಗಿ ಕಾಡತೊಡಗಿದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಪೊಲೀಸರು ಅಧಿಕಾರಿಗಳು ನಟಿ ರಾಗಿಣಿಯ ವಿಚಾರಣೆಗೆ ಸಮನ್ಸ್‌ ಮಾಡಿದ್ದಾರೆ ಎನ್ನಲಾಗಿದೆ.