-->

ಲೈಟ್ ಹೌಸ್ ಹಿಲ್(ಬಾವುಟ ಗುಡ್ಡೆ,ಈದ್ಗಾ) ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ನಾಮಕರಣ:-ಎಸ್‌ಡಿಪಿಐ ಆಕ್ಷೇಪ

ಲೈಟ್ ಹೌಸ್ ಹಿಲ್(ಬಾವುಟ ಗುಡ್ಡೆ,ಈದ್ಗಾ) ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ನಾಮಕರಣ:-ಎಸ್‌ಡಿಪಿಐ ಆಕ್ಷೇಪ


(ಗಲ್ಫ್ ಕನ್ನಡಿಗ)ಮಂಗಳೂರು:-ಮಹಾನಗರ ಪಾಲಿಕೆ ವ್ಯಾಪ್ತಿಯ ನೂರಾರು ವರ್ಷಗಳ ಇತಿಹಾಸವಿರುವ ಬಾವುಟಗುಡ್ಡೆ ಈದ್ಗಾ ಮಸ್ಜಿದ್ ಗೆ ಹೋಗುವ ಅಂಬೇಡ್ಕರ್ ವ್ರತ್ತದಿಂದ ಹಂಪನಕಟ್ಟೆ  ದಾರಿಗೆ ಸುಂದರ್ ರಾಮ ಶೆಟ್ಟಿ ಎಂದು ಹೆಸರನ್ನು ನಾಮಕರಣ ಮಾಡುವುದಕ್ಕೆ ಸರಕಾರ ಆದೇಶ ಹೊರಡಿಸಿರುವ ಕ್ರಮಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ ಮತ್ತು ಆಕ್ಷೇಪವನ್ನು ವ್ಯಕ್ತಪಡಿಸಿದೆ.

(ಗಲ್ಫ್ ಕನ್ನಡಿಗ)2017 ರಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದಲ್ಲಿ  ಲೋಬೋ ರವರು ಶಾಸಕರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಹೆಸರು ಬದಲಾವಣೆ ಮಾಡಲು ಪ್ರಯತ್ನ ನಡೆಸಿತ್ತು ಆ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು, ಅಲೋಶಿಯಸ್ ಕಾಲೇಜಿನವರು ಮತ್ತು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು ನಂತರ ಅಲೋಶಿಯಸ್ ಕಾಲೇಜು ಪರವಾಗಿ ಹೈಕೋರ್ಟ್ ಗೆ ಹೋಗಿ ತಡೆಯಾಜ್ಞೆ ತಂದ ಕಾರಣದಿಂದಾಗಿ ತಟಸ್ಥ ವಾಗಿತ್ತು.
ಆದರೆ ಪ್ರಸ್ತುತ ಬಿಜೆಪಿ ಸರ್ಕಾರ ಹೈಕೋರ್ಟ್ ತಡೆಯಾಜ್ಞೆಯನ್ನು ಹಿಂಪಡೆದುಕೊಂಡು  ತರಾತುರಿಯಲ್ಲಿ  ಸೆ.23 ನಾಳೆಯೇ ಹೆಸರು ನಾಮಕರಣ ಮಾಡಲು ಹೊರಟಿರುವುದು ಖಂಡನೀಯ.
ಸ್ಮಾರ್ಟ್ ಸಿಟಿ ಯೋಜನೆ ಭಾಗವಾಗಿ ಹಲವಾರು ಕಡೆ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇತಿಹಾಸ ಇರುವ ರಸ್ತೆಯ ಮತ್ತು ವೃತ್ತಗಳ ಹೆಸರುಗಳನ್ನು ಬದಲಾವಣೆ ಮಾಡುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ.

(ಗಲ್ಫ್ ಕನ್ನಡಿಗ)ಬಿಜೆಪಿ ಸರ್ಕಾರಕ್ಕೆ ನಿಜವಾಗಿಯೂ ಸುಂದರ್ ರಾಮ ರವರ ಮೇಲೆ ಅಷ್ಟು ಕಾಳಜಿ ಇದ್ದಿದ್ದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸುಂದರ್ ರಾಮ ಶೆಟ್ಟಿ ರವರು ಸ್ಥಾಪಿಸಿ ಬೆಳೆಸಿದಂತಹ ವಿಜಯ ಬ್ಯಾಂಕ್ ನ್ನು ಬರೋಡ ಬ್ಯಾಂಕ್ ನೊಂದಿಗೆ ವಿಲೀನಗೊಳಿಸುವಾಗ ಮೌನ ವಹಿಸಿದ್ದ ರಾಜ್ಯ ಮತ್ತು ಜಿಲ್ಲಾ ಬಿಜೆಪಿ ನಾಯಕರಿಗೆ ಇವರ ಮೇಲೆ ಎಷ್ಟು ಕಾಳಜಿ ಇದೆ ಎಂದು ಜನರಿಗೆ ಈಗಾಗಲೇ ಮನದಟ್ಟಾಗಿದೆ.ಇದೆಲ್ಲವನ್ನೂ ಮರೆಮಾಚಲು ಬೇಕಾಗಿ ರಸ್ತೆಗೆ ಸುಂದರ್ ರಾಮ ಶೆಟ್ಟಿ ಹೆಸರಿಟ್ಟು ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನದ ಭಾಗವಾಗಿದೆ.
ಹಾಗಾಗಿ ರಸ್ತೆಯ ಬದಲಾವಣೆ ಮಾಡಲೇಬೇಕೆಂಬ ಹಂಬಲ ವಿದ್ದರೆ ಹಲವಾರು ವರ್ಷಗಳ ಇತಿಹಾಸ ಇರುವ  "ಈದ್ಗಾ ಮಸೀದಿ ರಸ್ತೆ" ಎಂದು ನಾಮಕರಣ ಮಾಡಬೇಕೆಂದು ಎಸ್‌ಡಿಪಿಐ ದ.ಕ ಜಿಲ್ಲಾದ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99