ಕೇಂದ್ರ ಸಚಿವ ಸುರೇಶ್ ಅಂಗಡಿ ಕೋವಿಡ್ 19 ಗೆ ಬಲಿ: ಒಂದೇ ರಾಜ್ಯದಲ್ಲಿ ವಾರದಂತರದಲ್ಲಿ ಎರಡು ಸಂಸದರು ಬಲಿ
(ಗಲ್ಪ್ ಕನ್ನಡಿಗ)ನವದೆಹಲಿ : ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ(65) ಇಂದು ಕೊನೆಯುಸಿರೆಳೆದಿದ್ದಾರೆ. ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಾರದಂತರದಲ್ಲಿ ಕರ್ನಾಟಕ ರಾಜ್ಯದಲ್ಲಿ ಎರಡು ಬಿಜೆಪಿ ಸಂಸದರು ಕೊರೊನಾಗೆ ಬಲಿಯಾಗಿದ್ದಾರೆ.
(ಗಲ್ಪ್ ಕನ್ನಡಿಗ) ಸಂಸದರಾಗಿದ್ದ ಸುರೇಶ್ ಅಂಗಡಿ ಅವರು ಈ ಬಾರಿ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದರು. ಸಂಸದ ಸುರೇಶ್ ಅಂಗಡಿ ಅವರು ಪತ್ನಿ ಮಕ್ಕಳನ್ನು ಅಗಲಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಸ್ವತಃ ಸುರೇಶ್ ಅಂಗಡಿಯವರೇ ಕೊರೊನಾ ಪಾಸಿಟಿವ್ ಬಗ್ಗೆ ಟ್ವೀಟ್ ಮಾಡಿ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
(ಗಲ್ಪ್ ಕನ್ನಡಿಗ)ಸುರೇಶ್ ಅಂಗಡಿಯವರು ಬೆಳಗಾವಿ ಜಿಲ್ಲೆಯ ಕೊಪ್ಪದಲ್ಲಿ 1955 ರ ಜನವರಿ 1 ರಂದು ಜನಿಸಿದ್ದರು. ಚನ್ನಬಸಪ್ಪ ಅಂಗಡಿ ಸೋಮವ್ವ ಅಂಗಡಿ ದಂಪತಿಗಳ ಪುತ್ರನಾಗಿರುವ ಸುರೇಶ್ ಅಂಗಡಿಯವರು ಸುರೇಶ್ ಅಂಗಡಿ ನಾಲ್ಕನೇ ಬಾರಿ ಬೆಳಗಾವಿಯಿಂದ ಸಂಸತ್ ಪ್ರವೇಶಿಸಿದ್ದರು.1996 ರಲ್ಲಿ ಭಾರತೀಯ ಜನತಾ ಪಾರ್ಟಿ ಬೆಳಗಾವಿಯ ಉಪಾಧ್ಯಕ್ಷರಾಗಿದ್ದರು.ಆರ್.ಎಲ್ ಲಾ ಕಾಲೇಜ್ ಬೆಳಗಾವಿಯಲ್ಲಿ ಕಾನೂನು ಪದವಿ ಪಡೆದಿದ್ದರು.1999ರಲ್ಲಿ ಪಕ್ಷದ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷ, 2001ರಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.30 ಮೇ. 2019ರಲ್ಲಿ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿದ್ದರು.19 ಜುಲೈ 2016 ರಿಂದ 25 ಮೇ 2019ರ ವರೆಗೆ ಪಾರ್ಲಿಮೆಂಟ್ ಹೌಸ್ ಕಮಿಟಿ ಅಧ್ಯಕ್ಷರಾಗಿದ್ದರು. ಸುರೇಶ್ ಅಂಗಡಿ ಅವರು ಪತ್ನಿ ಮಂಗಳಾ ಅಂಗಡಿ , ಇಬ್ಬರು ಹೆಣ್ಣುಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ
(ಗಲ್ಪ್ ಕನ್ನಡಿಗ)